ಇತ್ತೀಚಿನ ಸುದ್ದಿ
ಮಾತಾ ಅಮೃತಾನಂದಮಯಿ ಮಠದ ದಸರಾ ಮಹೋತ್ಸವದಲ್ಲಿ ಖ್ಯಾತ ಗಾಯಕ ಅಜಯ್ ವಾರಿಯರ್
12/10/2024, 17:36

ಮಂಗಳೂರು(reporterkarnataka.com): ನಗರದ ಬೋಳೂರಿನಲ್ಲಿರುವ
ಶ್ರೀ ಬ್ರಹ್ಮಸ್ಥಾನ ಕ್ಷೇತ್ರಕ್ಕೆ ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಭೇಟಿ ನೀಡಿದರು. ಶ್ರೀ ಬ್ರಹ್ಮಸ್ಥಾನ ಕ್ಷೇತ್ರಾಭಿವೃದ್ಧಿ ಸಮಿತಿ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.
ಶ್ರೀ ಕ್ಷೇತ್ರದ ಪೂಜೆಯಲ್ಲಿ ಭಾಗವಹಿಸಿ “ಕೀರ್ತನ ಸೇವೆ”
ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಸುರೇಶ್ ಅಮೀನ್ ಸನ್ಮಾನಿಸಿದರು.
ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಅಕ್ಷತಾ ಶೆಣೈ ಕಾರ್ಯಕ್ರಮ ನಿರೂಪಣೆ ಮಾಡಿದರು. ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ದಿಲೀಪ್ ಕುಮಾರ್ ಭಾಗವಹಿಸಿದ್ದರು.