7:16 PM Tuesday13 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಕಾರ್ಮಿಕ ಇಲಾಖೆಯ ಸವಲತ್ತು ಫಲಾನುಭವಿಗಳಿಗೆ ತಲುಪಬೇಕು: ಆರಗ ಜ್ಞಾನೇಂದ್ರ

01/10/2024, 19:40

ರಶ್ಮಿ ಶ್ರೀಕಾಂತ್ ನಾಯಕ್
ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಈಗಾಗಲೇ 100 ಕ್ಕೂ ಹೆಚ್ಚು ಮಂದಿಗೆ ಕಾರ್ಮಿಕ ಕಿಟ್ ವಿತರಣೆ ಮಾಡಿದ್ದೇವೆ. ಈಗ ಉಳಿದ ಕಿಟ್ ಗಳನ್ನು ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದ ಬಹಳಷ್ಟು ಅನುಕೂಲ ಇದೆ ಆದರೆ ಅದು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅದನ್ನು ನಿಜವಾದ ಕಾರ್ಮಿಕರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಮಿಕರಿಗೆ ಕಿಟ್ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಸರ್ಕಾರ ಇರುವಾಗ ಕಾರ್ಮಿಕ ಇಲಾಖೆಯಲ್ಲಿ 7 ಸಾವಿರ ಕೋಟಿ ಹಣ ಇತ್ತು, ಕೊರೋನ ಸಂದರ್ಭದಲ್ಲಿ ತೀರ್ಥಹಳ್ಳಿಗೆ 15 ಸಾವಿರ ಕಿಟ್ ಬಂದಿತ್ತು, ಹಾಗೆಯೇ 5 ಸಾವಿರ ಹಣ ಪ್ರತಿಯೊಬ್ಬರ ಅಕೌಂಟ್ ಗೆ ಹಾಕಲಾಗಿತ್ತು. ಯಾವುದೇ ಕೆಲಸ ಆರಂಭ ಮಾಡುವಾಗ ಲೈಸೆನ್ಸ್ ಮಾಡಿಸುತ್ತೇವೆ ಹಾಗೆ ಅದನ್ನು ರಿನಿವಲ್ ಮಾಡುವ ಕೆಲಸ ಸಹ ನಿಮ್ಮಿಂದ ಆಗಬೇಕು ಎಂದರು.
ಕಾರ್ಮಿಕರು ಎಂದರೆ ಗಾರೆ, ಮ್ಯಾಕಾನಿಕ್, ಕ್ಷೌರಿಕರು, ಟೈಲರ್ ಹೀಗೆ ಎಲ್ಲರಿಗೂ ಅನುಕೂಲ ಇದೆ. ನಿಜವಾದ ಕಾರ್ಮಿಕ ಫಲಾನುಭವಿಗಳು ಸರಿಯಾದ ದಾಖಲೆ ಕೊಡಬೇಕು, ಮದುವೆ ಆದರೆ 50 ಸಾವಿರ ಹಣ ಬರುತ್ತದೆ, ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡಲಾಗುತ್ತದೆ. ತೀರ್ಥಹಳ್ಳಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿಗಳು ಕಡಿಮೆ ಇದ್ದಾರೆ, ತೀರ್ಥಹಳ್ಳಿ ಶಿವಮೊಗ್ಗಕ್ಕೆ ಒಬ್ಬರೇ ಅಧಿಕಾರಿಗಳು ಇದ್ದಾರೆ. ಹಾಗಾಗಿ ಸಮಸ್ಯೆ ಇದೆ ಎಂದರು. ಪ್ರತಿಯೊಬ್ಬ ಕಾರ್ಮಿಕರಿಗೂ ಮಾಹಿತಿ ತಿಳಿಯಬೇಕು, ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಗಳು ಜನರಿಗೆ ತಲುಪುವಂತೆ ಅಧಿಕಾರಿಗಳು ಮಾಡಬೇಕು ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಸುಚಿತ್ರ ಮಾತನಾಡಿ ಒಂದು ಬಾರಿ ಕಿಟ್ ವಿತರಣೆ ಮಾಡಿದ್ದಾಗ ಕೆಲವರು ಬಂದು ಗಲಾಟೆ ಮಾಡಿದರು. ಕಾರ್ಮಿಕ ಇಲಾಖೆಯ ಜಾಗದಲ್ಲಿ ಸಮಸ್ಯೆ ಆಗಿದ್ದ ಕಾರಣ ಬೇರೆಡೆ ಜಾಗದಲ್ಲಿ 1000 ರೂ ಹಣ ನೀಡಿ ಕಿಟ್ ಇಡಲಾಗಿತ್ತು. ಆದರೆ ಕೆಲವರು ಆ ವಿಷಯದಲ್ಲಿ ರಾಜಕೀಯ ಮಾಡಿ ತಡ ಮಾಡಿದರು ಆ ಕಾರಣದಿಂದ ತಡವಾಯಿತು ಎಂದಾಗ ಶಾಸಕರು ಮಾತ್ರ ಹಂಚುವುದು ಎಂದು ಪ್ರೆಶ್ನೆ ಮಾಡುತ್ತಾರೆ, ಅವರ ಅಪ್ಪನ ಮನೆಯಿಂದ ತಂದು ಹಂಚುತ್ತಾರ? ಇಂತಹ ವಿಷಯದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಏನಿದೆ? ಎಂದು ಆರಗ ಗರಂ ಆದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಜ್ಯೋತಿ ಮೋಹನ್ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು