ಇತ್ತೀಚಿನ ಸುದ್ದಿ
ಮೂಡಿಗೆರೆ: ಬೆಳ್ಳಂಬೆಳಗ್ಗೆ ಒಂಟಿ ಸಲಗ ಪಟ್ಟಣ ರೌಂಡ್ಸ್; ಕಾಫಿ ನಾಡಿನಲ್ಲಿ ನಿಲ್ಲದ ಕಾಡಾನೆ ಹಾವಳಿ
29/09/2024, 17:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬೆಳ್ಳಂಬೆಳಗ್ಗೆ ಒಂಟಿ ಸಲಗ ಸಿಟಿ ರೌಂಡ್ಸ್ ನಡೆಸಿದ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಮಲೆನಾಡಲ್ಲಿ ಒಂಟಿ ಸಲಗದ ಹಾವಳಿ ಮುಂದುವರಿದಿದ್ದು,
ಮೂಡಿಗೆರೆ ಪಟ್ಟಣದ ರಸ್ತೆಯಲ್ಲಿ ಒಂಟಿ ಸಲಗ
ಬೆಳಗಿನ ಜಾವ ಪಟ್ಟಣದಲ್ಲಿ ಅಡ್ಡಾದಿಡ್ಡಿ ಓಡಾಟ ನಡೆಸಿದೆ.
ಒಂಟಿ ಸಲಗದ ರೌಂಡ್ಸ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂಡಿಗೆರೆ ಪಟ್ಟಣದ ಸಂತೇ ಮೈದಾನ, ಪಟ್ಟಣ ಪಂಚಾಯಿತಿ ರಸ್ತೆ, ಹೊಯ್ಸಳ ಕ್ರೀಡಾಂಗಣದ ಪಕ್ಕದಲ್ಲಿ ಒಂಟಿ ಸಲಗ ವಾಕ್ ನಡೆಸಿದೆ. ಒಂಟಿ ಸಲಗವನ್ನು ಕಾಡಿಗಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ತೊಡಗಿದೆ.
ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.