ಇತ್ತೀಚಿನ ಸುದ್ದಿ
ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ
27/09/2024, 20:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮ ಪಂಚಾಯಿತಿಗೆ ಪಿಡಿಒ ನೇಮಕಾತಿ ಮಾಡುವಂತೆ ಆಗ್ರಹಿಸಿ ನಾಗರಿಕರೊಬ್ಬರು ಪಂಚಾಯಿತಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ಕೊಟ್ಟಿಗೆಹಾರ ಗ್ರಾಮದ ಸಂಜಯ್ ಎಂಬವರಿಂದ ಈ ಪ್ರತಿಭಟನೆ ನಡೆದಿದೆ.
15ನೇ ಹಣಕಾಸು ಯೋಜನೆ ಯ ಅನುದಾನ ಉಪಯೋಗವಾಗಿಲ್ಲ. ಪಿಡಿಒ ಇಲ್ಲದೆ 18ನೇಹಣಕಾಸು ಆಯೋಗದ ಹಣ ಪ್ರಯೋಜನವಾಗುತ್ತಿಲ್ಲ.ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರುವೆ ಗ್ರಾಪಂ ಮುಂದೆ ಕುಳಿತು ಅವರು ಏಕಾಂಗಿ ಹೋರಾಟ ನಡೆಸಿದ್ದಾರೆ.
ಸರ್ಕಾರ ಕೂಡಲೇ ಕಾಯಂ ಪಿಡಿಒ ನೇಮಕಾತಿ ಮಾಡಬೇಕು. ಇಲ್ಲದಿದ್ದರೆ ಏಕಾಂಗಿ ಹೋರಾಟ ಮುಂದುವರಿಸೋ ಎಚ್ಚರಿಕೆ ಅವರು ನೀಡಿದ್ದಾರೆ.
ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆ ಇದೆ. ಪಿಡಿಒ ಇಲ್ಲದೆ ಯಾವ ಕೆಲಸ ಕಾರ್ಯಗಳು ಆಗಿಲ್ಲ ಎಂದಿದ್ದಾರೆ.