ಇತ್ತೀಚಿನ ಸುದ್ದಿ
ಮಂಜಿನ ಮಧ್ಯೆ ಕಳೆದು ಹೋದ ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್: ಹೆಡ್ಲೈಟ್-ಫಾಗ್ ಲೈಟ್ ಇಲ್ದೆ ಗಾಡಿ ಓಡ್ಸೋದು ಕಷ್ಟ
23/09/2024, 22:41
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮುಳ್ಳಯ್ಯನಗಿರಿಯಂತಾದ ಚಾರ್ಮಾಡಿ ಘಾಟ್ ತಪ್ಪಲಿನ ಕೊಟ್ಟಿಗೆಹಾರ. ಮಂಜಿನ ಮಧ್ಯೆ ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್ ಕಳೆದು ಹೋಗಿದೆ.
ಕೊಟ್ಟಿಗೆಹಾರದಲ್ಲಿ ಹೆಡ್ಲೈಟ್-ಫಾಗ್ ಲೈಟ್ ಇಲ್ದೆ ಗಾಡಿ ಓಡ್ಸೋದು ಕಷ್ಟವಾಗಿದೆ.
ಸಂಜೆ 5 ಗಂಟೆಗೆ ಕೊಟ್ಟಿಗೆಹಾರ ಮಂಜಿನಲ್ಲಿ ಮರೆಯಾಗುತ್ತದೆ.
ಪ್ರಕೃತಿಯ ರಮಣೀಯ ಸೌಂದರ್ಯಕ್ಕೆ ಪ್ರವಾಸಿಗರು ಮೂಕವಿಸ್ಮಿತರಾಗಿದ್ದಾರೆ.
ಹಸಿರ ವನರಾಶಿಗೆ ಮಲ್ಲಿಗೆ ಹೂ ಮುಡಿಸಿದಂತೆ ನಿಸರ್ಗ ಮಾತೆ ಕಂಗೊಳಿಸುತ್ತಿದೆ. ಆಗಾಗ್ಗೆ ಒಂದಷ್ಟು ಮಳೆ… ಒಂದಷ್ಟು ಮಂಜು… ಹೊಸ ಲೋಕದಂತಾಗಿದೆ ಪಶ್ಚಿಮ ಘಟ್ಟದ ತಪ್ಪಲು.
ಮಂಜಿನ ಮಧ್ಯೆ ಎಲ್ಲೆಂದರಲ್ಲಿ ಗಾಡಿ ನಿಲ್ಸಿ ಪ್ರವಾಸಿಗರು
ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.