3:44 AM Wednesday29 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಅರುಣಗಿರಿ ಗ್ರಾಮಸ್ಥರಿಂದ ರಸ್ತೆಯ ಗುಂಡಿ ಮುಚ್ಚುವ ಮಹತ್ಕಾರ್ಯ: ಸಬ್ ಇನ್ಸ್ಪೆಕ್ಟರ್ ಶಿವನ್ ಗೌಡ ಮೆಚ್ಚುಗೆ

23/09/2024, 22:06

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿ ತಾಲೂಕಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ, ಎರಡನೇ ತಿರುಪತಿ ಎಂದೇ ಪ್ರಖ್ಯಾತಿ ಪಡೆದ ಅರುಣಗಿರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಗೋಪಿನಾಥ ಹಳ್ಳದ ಸೇತುವೆಯಿಂದ ಕುಣಿಗದ್ದೆಯವರೆಗೆ 1 ಕಿಲೋ ಮೀಟರ್ ದೂರದ ಡಾಂಬರ್ ರಸ್ತೆ ಭಾರಿ ಮಳೆಯಿಂದಾಗಿ ಹೊಂಡ ಗುಂಡಿಗಳಾಗಿದ್ದವು.
ಅರುಣಗಿರಿ ಕುಣಿಗದ್ದೆ ದಾಸನಗದ್ದೆಯ ಗ್ರಾಮಸ್ಥರು ಮತ್ತು ವಿನಾಯಕ ಸೇವಾ ಸಮಿತಿಯವರೆಲ್ಲರೂ ಸೇರಿ ತಾವೇ ಹೊಂಡ ಮುಚ್ಚುವ ಮಹತ್ಕಾರ್ಯಕ್ಕೆ ಕೈ ಜೋಡಿಸಿ ಭಾನುವಾರ ಹೊಂಡ ಗುಂಡಿ ಮುಚ್ಚುವ ಕಾರ್ಯ ನೆರವೇರಿಸಿದರು.
ಈ ವೇಳೆ ಇದೇ ರಸ್ತೆಯಲ್ಲಿ ಬರುತ್ತಿದ್ದ ತೀರ್ಥಹಳ್ಳಿಯ ಪೊಲೀಸ್ ಸಬ್ ಇನ್ಸಪೆಕ್ಟರ್ ಶಿವನ್ ಗೌಡರವರು ಗ್ರಾಮಸ್ಥರ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮತದಾನದ ವೇಳೆ ಚುನಾವಣೆ ಸಮಯದಲ್ಲಿ ರಸ್ತೆ ಆಗಿಲ್ಲ ಎಂದು ಬಹಿಷ್ಕಾರ ಹಾಕುವ ಬದಲು ಹೀಗೆ ತಮ್ಮ ಊರಿನ ರಸ್ತೆಗಳನ್ನು ಹಾಗೂ ಅಕ್ಕ ಪಕ್ಕದ ಊರಿನ ಸ್ವಚ್ಛತೆಯನ್ನು ನಾವೇ ಸರಿ ಪಡಿಸಿಕೊಂಡಿದ್ದರೆ ನಮ್ಮೆಲ್ಲರ ಗ್ರಾಮ, ಊರು ಸ್ವಚ್ಛಂದವಾಗಿರಲಿದೆ. ನಿಮ್ಮೆಲ್ಲರ ಸಮಾಜಮುಖಿ ಕೆಲಸ ಮುಂದುವರೆಸಿ ಎಂದು ಹಾರೈಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು