9:35 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವ ಗುಂಡಿ: ಸಂಬಂಧ ಪಟ್ಟ ಅಧಿಕಾರಿಗಳು ಗಮನಿಸಲಿ..!

22/09/2024, 13:56

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ರಾಷ್ಟ್ರೀಯ ಹೆದ್ದಾರಿ 169A ಶಿವಮೊಗ್ಗ ತೀರ್ಥಹಳ್ಳಿ ಆಗುಂಬೆ ಮಂಗಳೂರು ಸಂಪರ್ಕಿಸುವ ರಸ್ತೆ ಗುಡ್ಡೆಕೇರಿ ಸಮೀಪ ಕೌರಿಹಕ್ಕಲು ಬಳಿ ರಸ್ತೆಯ ಮಧ್ಯದಲ್ಲಿ ಮೂರು ನಾಲ್ಕು ಬೃಹತ್ ಗಾತ್ರದ ಹೊಂಡಗಳು ಬಿದ್ದು ಅ ಹೊಂಡದಲ್ಲಿ ರಸ್ತೆ ಕಾಂಕ್ರೀಟ್ ಗೆ ಬಳಸಿದ ಕಬ್ಬಿಣದ ರಾಡ್ ಗಳು ಎದ್ದು ನಿಂತಿದೆ. ಈ ಗುಂಡಿ ಇತ್ತೀಚೆಗೆ ಮೂರು ನಾಲ್ಕು ತಿಂಗಳುಗಳಿಂದ ಹಿಗೆ ಕಬ್ಬಿಣದ ರಾಡ್ ಕಾಣುವಂತೆ ಇದ್ದರು ಕೂಡ ರಾಷ್ಟ್ರೀಯ ಹೆದ್ದಾರಿ ಅದಿಕಾರಿಗಳು ಇದೆ ರಸ್ತೆಯಲ್ಲಿ ಪ್ರತಿ ದಿನ ಓಡಾಟ ಮಾಡುತ್ತಿದ್ದರು ಕೂಡ ಈ ಹೊಂಡ ಗುಂಡಿ ಗಮನಿಸಲಿಲ್ಲವೆ ಎನ್ನುವ ಮಾತು ಕೂಡ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.


ಈಗಾಗಲೇ ಕಾಂಕ್ರೀಟ್ ಸ್ಲ್ಯಾಬ್ ಬಾಯಿ ತೆರೆದ ಗುಂಡಿಗಳು ಹಾಗೆಯೇ ಬಾಯ್ತೆರೆದುಕೊಂಡಿದ್ದು ಕಬ್ಬಿಣದ ರಾಡ್ ಕಾಣುತ್ತಿದ್ದರು ಅಪಾಯಕ್ಕೆ ಆಹ್ವಾನ ನಿಡುತ್ತಿದ್ದರು. ಅದನ್ನು ಮುಚ್ಚುವ ಇಲ್ಲವೆ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಗೋಜಿಗೆ ಹೋಗದಿರುವುದು ರಾಷ್ಟ್ರೀಯ ಹೆದ್ದಾರಿ ಅದಿಕಾರಿಗಳ ಬೆಜಾವಬ್ದರಿ ಎದ್ದು ತೋರಿಸುತ್ತಿದೆ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ ಎಲ್ಲಿಯಾದರೂ ರಾತ್ರಿ ಸಮಯದಲ್ಲಿ ವಾಹನ ಓಡಾಡುವ ಸಂದರ್ಭದಲ್ಲಿ ಹೊಂಡಕ್ಕೆ ಬಿದ್ದು ಟಯರ್ ಪಂಕ್ಚರ್ ಆಗಿ ಯಾವುದಾದರೂ ಅನಾಹುತವಾದರೆ ಯಾರು ಹೊಣೆ? ಆ ಗುಂಡಿಯಿಂದ ಎದ್ದು ನಿಂತ ಕಬ್ಬಿಣದ ರಾಡ್ ರಸ್ತೆಯಲ್ಲಿ ಓಡಾಡುವ ವಾಹನ ಸವಾರರ ಪ್ರಾಣಕ್ಕೆ ಅಪಾಯವಾಗುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಿ ಹೊಂಡ ಗುಂಡಿಗಳನ್ನು ಮುಚ್ಚುವ ಮೂಲಕ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂಬ ಆಗ್ರಹ ವಾಹನ ಸವಾರರು ಮತ್ತು ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು