9:37 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೊಳ್ಳೆಗಳ ಹಾವಳಿ: ಸ್ವಚ್ಛತೆಗೆ ಮನವಿ

21/09/2024, 21:09

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯ ಕೊರತೆಯಿಂದ ಸೊಳ್ಳೆಗಳು ವಿಪರೀತವಾಗಿದ್ದು ಸಾಂಕ್ರಾಮಿಕ ರೋಗ ತಡೆಯುವ ಹಿನ್ನೆಲೆಯಲ್ಲಿ ಪರಿಸರ ಸ್ವಚ್ಛತೆ ಮಾಡಿ, ಔಷಧಿ ಸಿಂಪಡಿಸುವ ಮೂಲಕ ಆರೋಗ್ಯ ಕಾಪಾಡಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ವಕೀಲರು ಮತ್ತು ಒಂದೂವರೆ ಸಾವಿರಕ್ಕೂ ಅಧಿಕ ಸಾರ್ವಜನಿಕರು ಎಂದರೆ ವಯೋವೃದ್ಧರು, ಮಹಿಳೆಯರು, ಯುವಕರು ಪೋಷಕರೊಂದಿಗೆ ಪುಟಾಣಿ ಮಕ್ಕಳು ನ್ಯಾಯಾಲಯಕ್ಕೆ ಆಗಮಿಸುತ್ತಾರೆ. ಇತ್ತಿಚೆಗೆ ನ್ಯಾಯಾಲಯದ ಆವರಣದಲ್ಲಿ ಸ್ವಚ್ಚತೆ ಸಂಪೂರ್ಣ ಮರೀಚಿಕೆಯಾಗಿದ್ದು, ಸೊಳ್ಳೆಗಳ ಕಾಟ ವಿಪರೀತ ಹೆಚ್ಚಾಗಿದೆ.
ಸೊಳ್ಳೆಗಳು ಕೇವಲ ಆವರಣದಲ್ಲಷ್ಟೇ ಅಲ್ಲದೆ ನ್ಯಾಯಾಲಯ ಒಳಗಡೆಯೂ ಕಾಟಕೊಡುತ್ತಿದ್ದು ಹಿರಿಯ ವಕೀಲರು ಸೇರಿಂದತೆ ಎಲ್ಲರೂ ರೋಸಿ ಹೋಗಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘವು ತಮಗೆ ಅನೇಕ ಬಾರಿ ಮನವಿ ಮಾಡಿದ್ದು, ಇದೀಗ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಮನವಿ ಮಾಡುವುದೇನೆಂದರೆ, ಚಿತ್ರದುರ್ಗ ನಗರದ ಪೌರಸಿಬ್ಬಂದಿಗಳು ನಿತ್ಯ ನಗರದ ವಿವಿಧ ರಸ್ತೆ ಮತ್ತು ಚರಂಡಿ ಸ್ವಚ್ಛತೆ ಮಾಡುವಂತೆ ವಾರಕ್ಕೆ ಎರಡುದಿನ ಸೊಳ್ಳೆಗಳ ನಾಶಮಾಡಲು ಮತ್ತು ಸಾಂಕ್ರಾಮಿಕ ರೋಗ ತಡೆಯಲು ನ್ಯಾಯಾಲಯದ ಆವರಣದ ಪರಿಸರ ಸ್ವಚ್ಛತೆ ಮಾಡುವುದು ಅಗತ್ಯವಾಗಿದೆ.
ನ್ಯಾಯಾಲಯಕ್ಕೆ ಬರುವ ನಾಗರೀಕರ ಹಿತದೃಷ್ಟಿಯಿಂದ ಆವರಣದೊಳಗಿನ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಮಾಡಿಸಬೇಕೆಂದು ಮತ್ತು ಔಷಧಿ ಸಿಂಪಡಿಸಿ ಸೊಳ್ಳೆಗಳ ನಾಶಪಡಿಸಬೇಕು. ಪ್ರಮುಖವಾಗಿ ಸ್ವಚ್ಛತೆಗಾಗಿ ಇಬ್ಬರು ಪೌರಕಾರ್ಮಿಕರನ್ನು ನಿಯೋಜಿಸುವ ಮೂಲಕ ವಕೀಲರ ಆರೋಗ್ಯ ಮತ್ತು ನಾಗರೀಕರ ಹಿತರಕ್ಷಣೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಡಾ.ಎಂ.ಸಿ.ನರಹರಿ ಹಾಗೂ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು