ಇತ್ತೀಚಿನ ಸುದ್ದಿ
ತೀರ್ಥಹಳ್ಳಿಯ ಮೇಳಿಗೆಯಲ್ಲಿ 13 ಅಡಿ ಉದ್ದ, 30 ಕೆಜೆ ಭಾರದ ಭಾರೀ ಹೆಬ್ಬಾವು ಪ್ರತ್ಯಕ್ಷ!
20/09/2024, 15:24

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಮರವೊಂದನ್ನು ಹತ್ತಿ ಕುಳಿತುಕೊಂಡಿದ್ದ ಹೆಬ್ಬಾವೊಂದನ್ನು ಸ್ಥಳೀಯರೇ ಹಿಡಿದು ಅರಣ್ಯಕ್ಕೆ ಬಿಟ್ಟ ಘಟನೆ ಗುರುವಾರ ಸಂಜೆ ತೀರ್ಥಹಳ್ಳಿಯ ಮೇಳಿಗೆಯಲ್ಲಿ ನಡೆದಿದೆ.
ತಾಲೂಕಿನ ಮೇಳಿಗೆಯ ಕೆರೆದಂಡೆ ಬಳಿ ಇರುವ ಅಡಿಗೆ ಕಂಟ್ರಾಕ್ಟರ್ ಮಹೇಶ್ ಎಂಬುವರ ಮನೆ ಪಕ್ಕದ ಮರದಲ್ಲಿ 12 ರಿಂದ 13 ಅಡಿ ಉದ್ದದ ಅಂದಾಜು 30 ಕೆಜಿ ತೂಕದ ಹೆಬ್ಬಾವೊಂದು ಮರವನ್ನು ಏರಿ ಕುಳಿತಿತ್ತು. ಅದನ್ನು ನೋಡಿ ವಿಷಯ ತಿಳಿದು ಕಂತುಗದ್ದೆ ಪ್ರವೀಣ್ ಎಂಬುವರು ಅದನ್ನು ಹಿಡಿದು ಹತ್ತಿರದ ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.
ಹೆಬ್ಬಾವು ಎಲ್ಲಿಂದ ಬಂತು ಹೇಗೆ ಬಂತು ಎಂಬುದು ತಿಳಿದಿಲ್ಲ. ವಿಷಯ ತಿಳಿದು ಊರಿನ ಗ್ರಾಮಸ್ಥರು ಕೆಲ ಕಾಲ ಗಾಬರಿಗೊಂಡಿದ್ದರು.