1:30 PM Friday18 - April 2025
ಬ್ರೇಕಿಂಗ್ ನ್ಯೂಸ್
Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ

ಇತ್ತೀಚಿನ ಸುದ್ದಿ

ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ: ಪೂರ್ವಭಾವಿ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

16/09/2024, 15:36

ಬಂಟ್ವಾಳ(reporterkarnataka.com): ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ಸಿದ್ಧಕಟ್ಟೆ ವಲಯದ ವತಿಯಿಂದ ಸಾರ್ವಜನಿಕ ಶಾರದೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಮಹಾವೀರ ಜೈನ್ ನೇತೃತ್ವದಲ್ಲಿ ಎರಡನೇ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಭೆ ನಡೆಯಿತು.


ಸಭೆಯಲ್ಲಿ ಸಮಿತಿಯ ಗೌರವ ಅಧ್ಯಕ್ಷ ಬಿ. ರಮಾನಾಥ ರೈ ಅವರು 6ನೇ ವರ್ಷದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ರೂಪು ರೇಷೆಗಳನ್ನು ಚರ್ಚಿಸಿದರು.
ಪ್ರಧಾನ ಸಂಚಾಲಕ ಜಗದೀಶ್ ಕೊಯ್ಲ ಕಾರ್ಯಕ್ರಮದ ಕುಂದು ಕೊರತೆಗಳು ಬಾರದಂತೆ ಸವಿಸ್ತಾರವಾಗಿ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು,
ಅಧ್ಯಕ್ಷ ಮಹಾವೀರ್ ಜೈನ್ ನಡ್ಯೋಡಿ ಗುತ್ತು, ರಮೇಶ್ ಮಾಸ್ಟರ್ ರಾಯಿ, ರಾಮಚಂದ್ರ ಶೆಟ್ಟಿಗಾರ್, ಅನ್ನಲಿಕ್ಕೆ ಗೋಪಾಲ್ ಬಂಗೇರ ಉಳಿರೋಡಿ ಒಂದೆರಡು ಹಿತನುಡಿಗಳನ್ನ ನುಡಿದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಕೂತ್ಲೋಡಿ, ಕೋಶಾಧಿಕಾರಿ ದಾಮೋದರ್ ಪಿ ದೋಟ, ಮಹಿಳಾ ಅಧ್ಯಕ್ಷೆ ಶಕುಂತಲಾ ಆಚಾರ್ಯ, ಕಾರ್ಯದರ್ಶಿ, ಹೇಮಾ ಶೆಟ್ಟಿಗಾರ್ , ಬಾಬು ಶೆಟ್ಟಿ , ಗುಮ್ಮಣ್ಣ ನಾಯ್ಕ ಹಾಗೂ ಎಲ್ಲಾ ಸಂಚಾಲಕರು ಪದಾಧಿಕಾರಿಗಳು ಸದಸ್ಯರು ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಹಲವು ವಿಚಾರಗಳನ್ನ ಚರ್ಚಿಸಿ ಈ ವರ್ಷದ ಕಾರ್ಯಕ್ರಮವನ್ನ ಹಿಂದಿಗಿಂತಲೂ ಸುಂದರ ಹಾಗೂ ಅಚ್ಚು ಕಟ್ಟಾಗಿ ನಡೆಸಲು ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ರಿಕ್ಷಾ ಹಾಗೂ ದ್ವಿ ಚಕ್ರ ವಾಹನಗಳಿಗೆ ಪ್ರಚಾರಕ್ಕಾಗಿ ಸಿದ್ಧಕಟ್ಟೆ ದಸರಾ ಸ್ಟಿಕ್ಕರ್ ಹಂಚಲಾಯಿತು, ಶಾರದಾ ಮಾತೆಯ ಪೂಜೆಯ 10 ರಸೀದಿಗಳ 1 ಬುಕ್ ಪ್ರತಿಯೊಬ್ಬರಿಗೂ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮೀಳಾ ಲೋಕೇಶ್ ಪ್ರಾರ್ಥನೆ ಮಾಡಿದರು. ದಿನೇಶ ಶೆಟ್ಟಿಗಾರ್ ಸ್ವಾಗತಿಸಿದರು. ದಾಮೋದರ್ ಪಿ ದೋಟ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನ ಲಿಖಿತಾ ನಾರ್ಲೊಟ್ಟು ನಿರೂಪಿಸಿ ನಡೆಸಿಕೊಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು