2:51 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಬಸ್ ಸ್ಟಾಂಡ್ ಪಾಲಿಟಿಕ್ಸ್!: ಕಡಲನಗರಿಯಲ್ಲಿ ಚಿಲ್ಲರೆ ರಾಜಕೀಯಕ್ಕೆ ಪ್ರಯಾಣಿಕರು ಹೈರಾಣ!!

13/09/2024, 12:39

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಅದೊಂದು ಪುಟ್ಟ ಸಿಟಿ ಬಸ್ ನಿಲ್ದಾಣ. ಅವಸರದಲ್ಲಿ ಹೊಸತಾಗಿ ನಿರ್ಮಿಸಿದ ಬಸ್ ನಿಲ್ದಾಣ. ಹಾಗೆ ಅಷ್ಟೇ ಅವಸರದಲ್ಲಿ ತೆರುವು ಕೂಡ ಮಾಡಲಾಗಿದೆ. ಇಲ್ಲಿನ ಎರಡು ರಾಜಕೀಯ ಪಕ್ಷಗಳ ಮೇಲಾಟಕ್ಕೂ ಈ ಬಸ್ ನಿಲ್ದಾಣ ಸಾಕ್ಷಿಯಾಗಿದೆ.
ಇದು ಇರುವುದು ಕಡಲನಗರಿ ಮಂಗಳೂರಿನ ಹೃದಯ ಭಾಗವಾದ ಹಂಪನಕಟ್ಟೆಯಲ್ಲಿ. ಮಂಗಳೂರಿನ ವಿವಿ ಕಾಲೇಜು ಎದುರುಭಾಗದಲ್ಲಿ. ಇದೀಗ ಈ ತೆರವುಗೊಳಿಸಿದ ಬಸ್ ಸ್ಟಾಂಡ್ ವಿಷಯ ಟ್ರೆಂಡಿಂಗ್ ನಲ್ಲಿದೆ.


ಕರಾವಳಿಯ ಅತೀ ದೊಡ್ಡ ನಗರವಾದ ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸರ್ವೆ ಸಾಮಾನ್ಯವಾಗಿದೆ. ಪೀಕ್ ಅವರ್ಸ್ ನಲ್ಲಂತೂ ಇದರ ಸಮಸ್ಯೆ ಹೇಳಿ ತೀರದು. ಟ್ರಾಫಿಕ್ ಸುಧಾರಣೆ ಹೆಸರಿನಲ್ಲಿ ಅವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವುದು, ಟ್ರಾಫಿಕ್ ನಿಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಇದೀಗ ರಾಜಕೀಯ ಮೇಲಾಟವೂ ಸೇರಿಕೊಂಡಿದೆ. ವಿವಿ ಕಾಲೇಜು ಎದುರುಗಡೆ ಇರುವ ಬಸ್ ನಿಲ್ದಾಣದ್ದೂ ಇದೇ ಕತೆಯಾಗಿದೆ.
ವಾಸ್ತವದಲ್ಲಿ ಇಲ್ಲಿ ಬಸ್ ಸ್ಟಾಪ್ ಇರಲಿಲ್ಲ. ಈ ಜಾಗದಿಂದ ಸ್ವಲ್ಪ ಮುಂದುಗಡೆ ಆಟೋ ನಿಲ್ದಾಣದ ಬಳಿ ಬಸ್ ಸ್ಟಾಪ್ ಇತ್ತು. ಪ್ರಯಾಣಿಕರಿಗೆ ನಿಲ್ಲಲು ಬಸ್ ನಿಲ್ದಾಣವಿಲ್ಲದಿದ್ದರೂ ಬಿಸಿಲು ಮಳೆಗೆ ಪ್ರಯಾಣಿಕರು ಅಲ್ಲೇ ನಿಂತು ಬಸ್ ಹತ್ತುತ್ತಿದ್ದರು. ಆದರೆ ಇತ್ತೀಚೆಗೆ ಅಲ್ಲೇ ಸ್ವಲ್ಪ ಹಿಂದುಗಡೆ ಅಧಿಕೃತ ಬಸ್ ನಿಲ್ದಾಣವನ್ನು ಮಾಡಲಾಯಿತು. ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ ಪಕ್ಕದಲ್ಲೇ ಎಡಬದಿಗೆ ಮಾರುಕಟ್ಟೆ, ಕಾರ್ ಸ್ಟ್ರೀಟ್, ಬಂದರು ಕಡೆಗೆ ಹೋಗುವ ರಸ್ತೆ ಇದೆ. ಸಿಟಿ ಬಸ್ ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತದೆ. ಇದು ಬಸ್ ಸ್ಟಾಪ್ ನ ಅತೀ ಸನಿಹದಲ್ಲಿದೆ. ಇದರಿಂದ ಮತ್ತಷ್ಟು ಟ್ರಾಫಿಕ್ ಜಾಮ್ ಗೆ ದಾರಿ ಮಾಡಿಕೊಟ್ಟಾಗೆ ಆಗುತ್ತದೆ. ಇಷ್ಟೇ ಅಲ್ಲದೆ ಅಪಘಾತದ ಸಾಧ್ಯತೆಯೂ ಬಹಳಷ್ಟು ಹೆಚ್ಚಾಗಿದೆ. ಇದನ್ನೆಲ್ಲ ಅವಲೋಕಿಸುವಾಗ ಬಸ್ ಸ್ಟಾಪ್ ತೆರವುಗೊಳಿಸಿದ್ದು ಒಳ್ಳೆಯ ಕ್ರಮವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಹೇಳಿಕೊಳ್ಳುತ್ತಾರೆ. ಇಲ್ಲಿನ ಬಸ್ ನಿಲ್ದಾಣದ ಬದಲಿಗೆ ಅಲ್ಲೇ ಸ್ವಲ್ಪ ಮುಂದಕ್ಜೆ ಈ ಮುಂಚೆ ಇದ್ದ ಬಸ್ ಸ್ಟಾಪನ್ನು ಅಧಿಕೃತಗೊಳಿಸಿ ಅಲ್ಲೇ ಬಸ್ ನಿಲ್ದಾಣ ನಿರ್ಮಿಸುವ ವಿಫುಲ ಅವಕಾಶವಿದೆ. ಪ್ರಜ್ಞಾವಂತರ ಹಕ್ಕೊತ್ತಾಯ ಕೂಡ ಇದೇ ಆಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು