10:43 PM Saturday21 - December 2024
ಬ್ರೇಕಿಂಗ್ ನ್ಯೂಸ್
ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು… ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಣೆ: ಸದನದಲ್ಲಿ ಸಿಎಂ… ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿದ್ದ 24 ಪಾಕ್, 159 ಬಾಂಗ್ಲಾದೇಶ ಮೂಲದವರ ಬಂಧನ: ಗೃಹ… ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ

ಇತ್ತೀಚಿನ ಸುದ್ದಿ

ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್ ಸೀಟು ಪಡೆದ ಕತೆ!!

07/09/2024, 18:31

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ತೊಟ್ಟಿಲು ತೂಗಿದ ಕೈಗಳು ಇಡೀ ದೇಶವನ್ನೇ ಆಳ್ವಿಕೆ ಮಾಡಿದ ಉದಾಹರಣೆ ನಮ್ಮುಂದೆ ಇರುವಾಗ ಛಲವೊಂದಿದ್ದರೆ, ಏನನ್ನೂ ಸಾಧಿಸಬಹುದು ಎನ್ನುವುದು ಮತ್ತಷ್ಟು ಸ್ಷಷ್ಟ. ಇದಕ್ಕೊಂದು ನಮ್ಮ ನಿಮ್ಮ ನಡುವಿನ ಹುಡ್ಗಿಯೊಬ್ಬಳು ನಿದರ್ಶನ.
ಮಂಗಳೂರು ಹೊರವಲಯದ ಕೊಣಾಜೆ ಮುಟಿಂಜ ನಿವಾಸಿ ಪದ್ಮನಾಭ ಬಂಗೇರ ಹಾಗೂ ನೀರಜಾ ಅವರ ಪುತ್ರಿ ತನ್ವಿ ಛಲದಿಂದ ಗೆದ್ದಾಕೆ.ತನ್ವಿ ತಾಯಿ ಖಾಸಗಿ ಏಜೆನ್ಸಿಯಲ್ಲಿ ಅಕೌಂಟೆಂಟ್, ತಂದೆ ಮೇಸ್ತ್ರಿ. ಆರ್ಥಿಕವಾಗಿ ಅಷ್ಟೇನು ಗಟ್ಟಿಗರಲ್ಲ. ಆದರೆ ಪ್ರತಿಭೆ ಆ ಹುಡುಗಿಗೆ ಬೆನ್ನೆಲುಬು ತರಹ ಸಹಾಯ ಮಾಡಿತು. ಎಸ್‌ಎಸ್‌ಎಲ್‌ಸಿಯಲ್ಲಿ 613 ಅಂಕ, ಪಿಯುಸಿಯಲ್ಲಿ 575 ಅಂಕ ಪಡೆದವಳಾಕೆ. ವೈದ್ಯೆಯಾಗುವ ಕನಸು ಕಂಡಿದ್ದಳು. ಮಗಳು ವೈದ್ಯೆಯಾಗಬೇಕು ಎಂಬುದು ಪೋಷಕರ ಕನಸು ಕೂಡ ಆಗಿತ್ತು. ಆದರೆ ಲಕ್ಷಗಟ್ಟಲೆ ಶುಲ್ಕ ಪಾವತಿಸಿ ಎಂಬಿಬಿಎಸ್ ಓದುವುದು ಅವರಿಗೆ ಕನಸಿನ ಮಾತಾಗಿತ್ತು. ಈ ನಡುವೆ ಕಳೆದ ವರ್ಷದ ನೀಟ್ (NEET) ಪರೀಕ್ಷೆಯಲ್ಲಿ ಆಕೆ 720ಕ್ಕೆ 457 ಅಂಕಗಳನ್ನು ಗಳಿಸಿ 1,55,670 ರ್ಯಾಂಕ್ ಪಡೆದಿದ್ದಳು. ಈ ಶ್ರೇಣಿಯಲ್ಲಿ ಆಕೆ ಎಂಬಿಬಿಎಸ್ ಸೀಟು ಪಡೆದಿದ್ದರೂ, ಲಕ್ಷಾಂತರ ಶುಲ್ಕವನ್ನು ಪಾವತಿಸಬೇಕಾಗಿತ್ತು. ಈ ವೇಳೆ ಪೋಷಕರು ತನ್ವಿಗೆ ನರ್ಸಿಂಗ್ ಓದುವುದೇ ಸೂಕ್ತ ಎಂದು ನಿರ್ಧರಿಸಿದ್ದರು. ಆದರೆ ವೈದ್ಯಳಾಗುವ ಕನಸಿಗೆ ಮಾತ್ರ ಹಿಂದೆ ಸರಿಯಲಿಲ್ಲ. ಅಷ್ಟರಲ್ಲಿ ನಾನೇಕೆ ನೀಟ್ ಓದಿ ಮತ್ತೆ ಎಂಬಿಬಿಎಸ್ ಸೀಟು ಪಡೆಯಬಾರದು ಎಂದು ಹಠಕ್ಕೆ ಬಿದ್ದಳು. ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟು ಪಡೆಯಬೇಕೆಂದು ಹಠಕ್ಕೆ ಬಿದ್ದು ಯೆನೆಪೊಯದಲ್ಲಿ ಉಚಿತ ಕೋಚಿಂಗ್ ಪಡೆದು ಈ ವರ್ಷ ನೀಟ್ ನಲ್ಲಿ 720ರಲ್ಲಿ 647 (28,782 ಆಲ್ ಇಂಡಿಯಾ ರ್ಯಾಂಕ್) ಗಳಿಸಿದ್ದಾಳೆ. ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಸೀಟು ಪಡೆದು ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದ್ದಾಳೆ. ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ತನ್ವಿಯ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು