ಇತ್ತೀಚಿನ ಸುದ್ದಿ
ನಂಜನಗೂಡು: ಹೆಮ್ಮರಗಾಲ ಪಿಎಸಿಸಿ ಬ್ಯಾಂಕ್ ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
27/08/2024, 19:28
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲೂಕಿನ ಹೆಮ್ಮರ ಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಸಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಂಘದ ಆವರಣದಲ್ಲಿ ನಡೆದ ಸಭೆಯ ಉದ್ಘಾಟನೆಯನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಹಿರಿಯ ಸದಸ್ಯರು ದೀಪ ಬೆಳಗುವ ಮೂಲಕ ನೆರವೇರಿಸಿದರು. ಬಳಿಕ ಸಂಘದ ಅಧ್ಯಕ್ಷ ಸೋಮಣ್ಣ ಮಾತನಾಡಿ ಸಹಕಾರ ಸಂಘ ಇರುವುದೇ ಸದಸ್ಯರ ಹಾಗೂ ರೈತರ ಅನುಕೂಲಕ್ಕಾಗಿ ಸಂಘದಿಂದ ಜೀರೋ ಪರ್ಸೆಂಟ್ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ರೈತರು ಇದನ್ನು ಪಡೆದು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದರೆ ಸಂಘಕ್ಕು ಒಳ್ಳೆಯ ಲಾಭ ಬರುತ್ತದೆ ಹಾಗೂ ತಮಗೂ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಹಾಗಾಗಿ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿ ಈ ಸಾಲಿನಲ್ಲಿ ಸಂಘವು ಲಾಭದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುದ್ದು ಮಾದಸ್ವಾಮಿ ಸಂಘದ 2023-24ನೇ ಸಾಲಿನ ಆಡಿಟ್ ಆದ ಜಮಾ, ಖರ್ಚು, ಲಾಭ, ನಷ್ಟದ ಬಗ್ಗೆ ಓದಿ ಸಭೆಗೆ ತಿಳಿಸಿದರು.
ಈ ಸಂದರ್ಭ ಕೆಲವು ಸದಸ್ಯರು ಮಾತನಾಡಿ ಹಿಂದಿನ ಕಾರ್ಯದರ್ಶಿ ಅಧಿಕಾರ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗದ ಬಗ್ಗೆ ಪ್ರಸ್ತಾಪ ಮಾಡಿದರು. ಹಾಗೆಯೆ ಸಂಘವು ಲಾಭಾಂಶದಲ್ಲಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣ ಮಾಜಿ ಅಧ್ಯಕ್ಷರಾದ ಪುಟ್ಟರಾಜನಾಯಕ, ನಾಗರಾಜು ಸೇರಿದಂತೆ ನಿರ್ದೇಶಕರುಗಳಾದ ವೃಷಭೇಂದ್ರಪ್ಪ ,ಪುಟ್ಟ ಮಾದಯ್ಯ, ಚಿನ್ನಸ್ವಾಮಿ, ಮೀನಾಕ್ಷಿ, ಮಹಾದೇವ, ಶಿವ ನಾಗೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.