5:57 PM Sunday5 - October 2025
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು

ಇತ್ತೀಚಿನ ಸುದ್ದಿ

ಶಿವಶಂಕರ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಲಕರ ಸಭೆ

24/08/2024, 23:51

ಸಂತೋಷ್ ಬೆಳಗಾವಿ

info.reporterkarnataka@gmail.com

ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಸರಕಾರ ಆದೇಶ ಮಾಡಿದ್ದು ಸ್ವಾಗತಾರ್ಹ. ಪ್ರತೀ ತಿಂಗಳು ಸಭೆ ಮಾಡುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಿ ಹೆಚ್ಚು ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸುವ ಸರಳ ಮಾರ್ಗವೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು.
ಅವರು ಹಳ್ಳೂರ 24 ಗ್ರಾಮದ ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿ ದರು.
ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಶಿಕ್ಷಣ ಜೀವನದ ತಳಪಾಯವಿದ್ದಂತೆ. ಉನ್ನತ ಮಟ್ಟದ ಶಿಕ್ಷಣ ಕಲಿತು ಮೇಧಾವಿಗಳಾಗಿರಿ ಮೊಬೈಲ್ ಟಿವಿ ಕಡೆ ಗಮನ ಕೊಡದೆ ಹೆಚ್ಚು ಅಭ್ಯಾಸದ ಗಮನ ಹರಿಸಿ ವಿದ್ಯಾವಂತರಾಗಿರೆಂದು ಹೇಳಿದರು. ಪ್ರಧಾನ ಗುರುಗಳಾದ ಆರ್. ಕೆ. ಮೆಲಗಡೆ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಶಿಕ್ಷಕರಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ನಮ್ಮ ಗಮನಕ್ಕೆ ತಂದರೆ ಸರಿ ಪಡಿಸಿಕೊಳ್ಳುತ್ತೇವೆ. ಎಲ್ಲರೂ ಸೇರಿಕೊಂಡು ಶಾಲೆಗೆ ವಿದ್ಯಾರ್ಥಿಗಳ ಇನ್ನಷ್ಟು ಸಂಖ್ಯೆ ಹೆಚ್ಚಿಸಿ ಶಾಲೆಯ ಕೀರ್ತಿ ಬೆಳೆಸೋಣಾ ಎಂದು ಹೇಳಿದರು. ಬಸಲಿಂಗ ಬಾಗೋಡಿ ಮಾತನಾಡಿ ಮಕ್ಕಳಿಗೆ ದಿನಾಲು ಎಲ್ಲಾ ರೀತಿಯ ಪಾಠ ಕಲಿಸುವದರ ಜೊತೆಗೆ ಮರಳಿ ನೆನಪಿಸಿಕೊಂಡು ಮಕ್ಕಳ ತಲೆಯಲ್ಲಿ ಉಳಿಯುವ ಹಾಗೆ ಶಿಕ್ಷಣ ನೀಡಬೇಕು.ಪಾಲಕರ ಸಭೆಯು ಪ್ರತಿ ತಿಂಗಳು ಅರ್ಥ ಪೂರ್ಣವಾಗಿ ನಡೆಯಿಲಿ ಎಂದು ಹೇಳಿದರು. ಸಭೆಯಲ್ಲಿ ಮಕ್ಕಳನ್ನು ಎಬ್ಬಿಸಿ ಸರಳ ಪ್ರಶ್ನೆ ಕೇಳಿದಾಗ ಕೆಲವು ಪ್ರಶ್ನೆಗೆ ಮಾತ್ರ ಉತ್ತರವನ್ನು ನೀಡಿದರು. ಪಾಲಕರು ಮತ್ತು ಶಿಕ್ಷಕರ ಮದ್ಯೆ ಕೆಲವು ವಿಚಾರ ನಡೆದವು.
ಈ ಸಮಯದಲ್ಲಿ ಸಿದ್ದಪ್ಪ ಅಂಗಡಿ, ದುಂಡಪ್ಪ ಕೂಲಿಗೋಡ, ಲಕ್ಷ್ಮಣ ಗಲಗಲಿ, ಸಂಜು ಕೊರೆ, ಕೆಂಪವ್ವ ಅಂಗಡಿ, ಶಿಕ್ಷಕರಾದ ಬಿ. ಜೆ. ಪಾರ್ಥನಳ್ಳಿ,ರಾಮು ಹರಿಜನ, ಶೋಭಾ ಮುತಾರಿ, ಪಾಲಕರಾದ ನಾಗಪ್ಪ ಬಿಸನಾಳ, ಶಂಕರ ಮಾಲಗಾರ, ಪ್ರಕಾಶ ಲೋಕನ್ನವರ, ಪ್ರಕಾಶ ಬಾಗೋಡಿ ಸೇರಿದಂತೆ ಅನೇಕರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು