8:54 AM Wednesday23 - October 2024
ಬ್ರೇಕಿಂಗ್ ನ್ಯೂಸ್
ಸುರತ್ಕಲ್ ಎನ್ ಐಟಿಕೆ: ಯುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪರ್ಕಿಸುವ ‘ಜಂಬೋರಿ ಆನ್… ರೈಲ್ವೆ ಹಳಿ ಮೇಲೆ ಕಲ್ಲು ಇಟ್ಟ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ: ಸಂಸದ ಕ್ಯಾ.… ಕ್ರೂರ ವಿಧಿಯಾಟ: ಮದುವೆ ನಿಶ್ಚಿತಾರ್ಥವಾದ ಯುವತಿ ರಸ್ತೆ ಅಪಘಾತಕ್ಕೆ ಬಲಿ; ಮುಂದಿನ ತಿಂಗಳು… ಚಿಕ್ಕಮಗಳೂರು: ಭಾರೀ ಮಳೆ; ಜನಜೀವನ ಅಸ್ತವ್ಯಸ್ತ; ಸಿಡಿಲಿಗೆ ಎತ್ತು ಬಲಿ ವಿಜ್ಞಾನ ಮೇಳ: ಸೆನ್ಸಾರ್ ಆಧಾರಿತ ಮಾದರಿಯಲ್ಲಿ ಸೇವಾ ಭಾರತಿ ವಿದ್ಯಾರ್ಥಿ ನಹುಷ್ ಪ್ರಥಮ ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ… ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಹಳೆ ವಿದ್ಯಾರ್ಥಿನಿ, ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಸಾಜಿದಾ…

ಇತ್ತೀಚಿನ ಸುದ್ದಿ

ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

18/08/2024, 23:43

ಮಂಗಳೂರು (reporterkarnataka.com):ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಮಂಗಳೂರು ಇದರ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ಯೋತ್ಸವವನ್ನು ಆಚರಿಸಲಾಯಿತು.
ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ನಿವೃತ್ತ ಯೋಧ ಕ್ಯಾಪ್ಟನ್ ಶ್ರೀನಿವಾಸ ಅಮೀನ್ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಸೇನೆಯ ಸೇವೆಯಲ್ಲಿರುವಾಗ ಯುದ್ಧದ ಸಂದರ್ಭದಲ್ಲಿ ತಾವು ಪಾಲ್ಗೊಂಡಿದ್ದ ಕಾರ್ಯಚರಣೆ ಪ್ರಸ್ತಾಪಿಸಿ ಬಾವುಕರಾದರು. ದೇಶವು ಬಲಿಷ್ಟವಾಗಬೇಕಾದರೆ ಜನರು ಬಲಿಷ್ಟರಾಗಬೇಕು. ದೇಶವನ್ನು ಬಲಿಷ್ಟಗೊಳಿಸುವ ಜವಾಬ್ದಾರಿ ಪ್ರಜೆಗಳದ್ದು, ಕರಾವಳಿಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಭಾರತೀಯ ವಾಯುಪಡೆಯ ನಿವೃತ್ತ ಯೋಧರು ಹಾಗೂ ಸಹಕಾರ ಸಂಘಗಳ ನಿವೃತ್ತ ಉಪನಿಭಂದಕರಾದ ಚಂದ್ರಶೇಖರ್ ಸುವರ್ಣರವರು ಮಾತನಾಡಿ, ದೇಶ ಸೇವೆಯಲ್ಲಿ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತದವರು ಸೇವೆ ಸಲ್ಲಿಸುತ್ತಿದ್ದು, ನಮ್ಮ ಕರಾವಳಿ ಭಾಗದವರ ಸಂಖ್ಯೆ ತುಂಬಾ ಕಡಿಮೆಯಿದೆ. ದೇಶ ಸೇವೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ದೇಶ ಸೇವೆಯ ಕಾಯಕದ ಜೊತೆಗೆ ತಮ್ಮ ಭವಿಷ್ಯವನ್ನು ಕೂಡ ಕೆಲಸದ ಭದ್ರತೆಯೊಂದಿಗೆ ಗಟ್ಟಿ ಗೊಳಿಸಬಹುದು. ಅಗ್ನಿಪಥ್ ಯೋಜನೆಯನ್ನು ಸರಕಾರ ಜಾರಿಗೊಳಿಸಿದ್ದು, ಭವಿಷ್ಯದಲ್ಲಿ ಸೇನೆಗೆ ಸೇರುವವರಿಗೆ ಇದು ಒಂದು ಉತ್ತಮ ವೇದಿಕೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸೇನೆಯಲ್ಲಿ ಆಧ್ಯತೆ ನೀಡಲಾಗುತ್ತಿದ್ದು, ಮಹಿಳೆಯರೂ ಕೂಡ ಅಧಿಕ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆ ಗೊಳ್ಳುತ್ತಿದ್ದಾರೆ ಎಂದರು.
ಸಂಘದ ಅಧ್ಯಕ್ಷರಾದ “ಸಹಕಾರ ರತ” ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಸಂಘವು ಪ್ರತಿ ವರ್ಷ ಸ್ವಾತಂತ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆಗೈದ ಯೋಧರನ್ನು ಸನ್ಮಾನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾ ಬರುತ್ತಿದೆ. ಈ ಬಾರಿಯ ಸ್ವಾತಂತ್ಯೋತ್ಸವದಲ್ಲಿ ದೇಶ ಸೇವೆಯ ಪರಮೋಚ್ಚ ಕಾಯಕದಲ್ಲಿ ಸುದೀರ್ಘ 30 ವರ್ಷಗಳ ಕಾಲ ತನ್ನನ್ನು ತೊಡಗಿಸಿಕೊಂಡು, ಮೂರು ಯುದ್ದಗಳಾದ ಇಂಡೋ – ಚೀನಾ ಯುದ್ದ, ಭಾರತ – ಪಾಕಿಸ್ಥಾನ ಯುದ್ದ ಹಾಗೂ ಬಾಂಗ್ಲಾ ಯುದ್ದಗಳಲ್ಲಿ ಭಾಗವಹಿಸಿದ ಹೆಮ್ಮೆಯ ಯೋಧರು ಹಾಗೂ “ಮೆನ್ಷನ್ ಇನ್ ಡಿಸ್‌ಪ್ಯಾಚ್” ಪ್ರಶಸ್ತಿ ಪುರಸ್ಕೃತರಾದ ಕ್ಯಾಪ್ಟನ್ ಶ್ರೀನಿವಾಸ ಅಮೀನ್ ಅವರನ್ನು ಇವತ್ತಿನ ಸಮಾರಂಭದಲ್ಲಿ ಸನ್ಮಾನಿಸಲು ನಮ್ಮ ಸಂಘ ತುಂಬಾ ಹೆಮ್ಮೆ ಪಡುತ್ತಿದೆ, ದೇಶಕೋಸ್ಕರ ಹಲವು ಯುದ್ಧದಲ್ಲಿ ಭಾಗವಹಿಸಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ಯೋಧರನ್ನು ಸನ್ಮಾನಿಸುವುದು ನಮ್ಮ ಭಾಗ್ಯವೆಂದರು.


ಈ ಸಂದರ್ಭದಲ್ಲಿ ನಿವೃತ್ತ ಯೋಧ ಕ್ಯಾಪ್ಟನ್ ಶ್ರೀನಿವಾಸ ಅಮೀನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ. ಸಂಘದ ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ್ ಎನ್., ರಮಾನಾಥ್ ಸನಿಲ್, ದಿವಾಕರ್ ಬಿ.ಪಿ., ಗೋಪಾಲ್ ಎಮ್, ಉಮಾವತಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿ, ಸಹಾಯಕ ಪ್ರಬಂದಕರಾದ ವಿಶ್ವನಾಥ ವಂದಿಸಿದರು. ಸಂಘದ ಹಿರಿಯ ಶಾಖಾಧಿಕಾರಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು