ಇತ್ತೀಚಿನ ಸುದ್ದಿ
ಅಹ್ಮದ್ ಸಾಬ್ ಕೊಲೆ ಪ್ರಕರಣ: ಆರೋಪಿಗಳ ತಕ್ಷಣ ಬಂಧಿಸುವಂತೆ ಆಗ್ರಹ
18/08/2024, 08:02
ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ಹುಣಸಗಿ ಪಟ್ಟಣದಲ್ಲಿ ಶಾರುಖ್ ತಂದೆ ಅಹ್ಮದ್ ಸಾಬ್ ರಾಯಚೂರು ಕೊಲೆ ಮಾಡಿ ಆಳದಲ್ಲಿ ಬಿಸಾಕಿ ಹೋಗಿರುವ ಆರೋಪಿಗಳನ್ನು ತನಿಖೆ ಮಾಡಿ ಆದಷ್ಟು ಬೇಗನೆ ಬಂಧಿಸಬೇಕೆಂದು ಎಂದು ಹುಣಸಗಿಯಲ್ಲಿ ಸುನ್ನಿ ಮುಸ್ಲಿಂ ಕಬ್ರ್ ಸ್ಥಾನ ವಕ್ ಬೋರ್ಡ್ ಕಮಿಟಿ ಹಾಗೂ ಟಿಪ್ಪು ಸುಲ್ತಾನ ಸಂಯುಕ್ತ ರಂಗ ಕಮಿಟಿ ಪೊಲೀಸರಿಗೆ ಆಗ್ರಹಿದೆ.
ಈ ಸಂದರ್ಭದಲ್ಲಿ ಸುನ್ನಿ ವಕ್ಫ್ ಬೋರ್ಡ್ ಕಮಿಟಿ ಅಧ್ಯಕ್ಷರಾದ ಸುಭಾನಲಿ ಡಕ್ಕನ, ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಅಧ್ಯಕ್ಷ ರಸುಲ್ ಬೆನ್ನೂರ, ಮಹಮ್ಮದ್ ಅಲಿ ಹವಾಲ್ದಾರ, ಮಿರ್ಜಾ ನಾದಿರ್ ಬೇಗ, ಲತ್ತಿಫ್ನದಾಫ, ಇಸ್ಮೈಲ್ ಬೆಣ್ಣೆ, ನಬಿಲಾಲ್ ಪಟೇಲ, ಯಾತನೂರ, ಸದ್ದಾಂ ಚೌದ್ರಿ, ಖಾಜಾ ಪಟೇಲ, ಖಾದರ್ ಬೆಕಿನಾಳ, ಅನ್ವರ್ ಪಾಷಾ ಚೌದ್ರಿ,
ಹಾಗೂ ಇನ್ನೂ ಅನೇಕ ಮುಸ್ಲಿಂ ಬಾಂಧವರು ಮನವಿ ಪತ್ರ ಸಲ್ಲಿಸಿದರು.