3:41 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಬೆಳಗಾವಿ: ಹಳ್ಳೂರ ಗ್ರಾಮದ 15 ಕಡೆಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

16/08/2024, 15:41

ಸಂತೋಷ್ ಬೆಳಗಾವಿ

info.reporterkarnataka@gmail.com

ಹಳ್ಳೂರ ಗ್ರಾಮದ 15 ಕಡೆಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಸರಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜು, ಸಹಕಾರಿ ಸಂಘ ಸಂಸ್ಥೆ, ಬ್ಯಾಂಕ್ ಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಗ್ರಾಮ ಪಂಚಾಯಿತಿ ಧ್ವಜಾರೋಹಣವನ್ನು ಅಧ್ಯಕ್ಷೆ ನೀಲವ್ವ ಹೊಸಟ್ಟಿ ಮಾಡಿದರು. ಗ್ರಾಮ ಆಡಳಿತ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೇಪ್ಪಗೊಳ, ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ವಿಶ್ವನಾಥ ಹುಕ್ಕೇರಿ ಬಳವಂತರಾವ ಕುಲಕರ್ಣಿ, ಮಹಾಲಕ್ಷ್ಮೀ ಪ್ರೌಢ ಶಾಲೆಯಲ್ಲಿ ಸುನಂದಾಬಾಯಿ ವಸಂತರಾವ ಕುಲಕರ್ಣಿ, ಗ್ರಾಮದ ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಕ್ಷ್ಮಣ ಲೋಕನ್ನವರ, ಮುರಿಗೆಪ್ಪ ಮಾಲಗಾರ. ಶ್ರೀಕಾಂತ ಕೌಜಲಗಿ ಧ್ವಜಾರೋಹನ ನೆರವೇರಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಸುರೇಶ ಕತ್ತಿ, ಶ್ರೀ ಬಸವೇಶ್ವರ ಬ್ಯಾಂಕಿನಲ್ಲಿ ಅಧ್ಯಕ್ಷ ಶಂಕರಯ್ಯ ಹೀರೆಮಠ. ಅಂಬೇಡ್ಕರ ಭವನದಲ್ಲಿ ಮಾರುತಿ ದೊಡಮನಿ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ಭೀಮಶಿ ಮಗದುಮ, ಹನಮಂತ ತೇರದಾಳ, ಗ್ರಾಂಪ ಮಾಜಿ ಅಧ್ಯಕ್ಷ ಲಕ್ಷ್ಮಣ ಕತ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಂಗಣ್ಣ ಗುಜನಟ್ಟಿ, ಕುಮಾರ ಲೋಕನ್ನವರ, ಮಾಜಿ ಸೈನಿಕ ಸುರೇಶ ಬಾಗಡಿ, ಆರ್. ಕೆ. ಮೇಲಗಡೆ, ಸುರೇಶ ಮಗದುಮ, ಮಾದೇವ ಹೊಸಟ್ಟಿ, ಯಾಸಿನ್ ಮುಜಾವರ್, ಲಕ್ಷ್ಮಣ ಛಬ್ಬಿ, ಶ್ರೀಶೈಲ ಬಾಗೋಡಿ, ಬಸಪ್ಪ ಹಡಪದ, ಬಸವರಾಜ್ ಲೋಕನ್ನವರ, ಗಜಾನನ ಡಬ್ಬನ್ನವರ, ಯಮನಪ್ಪ ನಿಡೋಣಿ. ಲಕ್ಕಪ್ಪ ಸಪ್ತಸಾಗರ.ಬಾಳಪ್ಪ ಬಾಗೋಡಿ, ಶ್ರೀಶೈಲ ತವಗ, ಗೀರಮಲ್ಲ ಸಂತಿ, ರವೀಂದ್ರ ನುಚ್ಚುಂಡಿ, ಕೆಂಪಣ್ಣ ಅಂಗಡಿ ಸೇರಿದಂತೆ ಅನೇಕರಿದ್ದರು. ಬಿ. ಕೆ.ಎಂ. ಪ್ರೌಢ ಶಾಲೆಯಲ್ಲಿ ಕಳೆದ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೇದ  ನಾಗರಾಜ್ ಕುಲಿಗೋಡ  ಹಾಗೂ ಸರಸ್ವತಿ ಹಿರೇಮಠ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ  ಬಹುಮಾನ ವಿತರಣೆ ಮಾಡಿದರು. ವರದಿ ವಾಚನವನ್ನು ಎಂ ಎನ್ ಕುಲಕರ್ಣಿ ಮಾಡಿದರು.
ಮಹಾದೇವ ದಡ್ಡಿಮನಿ ಸ್ವಾಗತಿಸಿದರು. ಆರ್. ಎನ್. ತೆಲಸಂಗ ವಂದಿಸಿದರು. 

ಇತ್ತೀಚಿನ ಸುದ್ದಿ

ಜಾಹೀರಾತು