ಇತ್ತೀಚಿನ ಸುದ್ದಿ
ಬುರ್ಖಾ ಧರಿಸಿ ಬಂದ ಬಾಳೆಹೊನ್ನೂರು ಯುವಕನಿಗೆ ಬಿತ್ತು ಗೂಸಾ: ಮನಮೆಚ್ಚಿದ ಹುಡ್ಗಿಗಾಗಿ ಈ ಎಲ್ಲ ವೇಷ!
13/08/2024, 21:20

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ
ಹುಡುಗಿಗಾಗಿ ಬುರ್ಖಾ ಧರಿಸಿ ನಿಂತಿದ್ದ ಯುವಕನ ಚಲನವಲನ ವೀಕ್ಷಿಸಿ ಅನುಮಾನಗೊಂಡ ಸಾರ್ವಜನಿಕರು ಥಳಿಸಿದ ಘಟನೆ ನಡೆದಿದೆ.
ಬೆರಳಿಗೆ ನೈಲ್ ಪಾಲಿಶ್ ಹಾಕಿ ಶೃಂಗಾರ ಮಾಡಿಕೊಂಡಿದ್ದ ಈ ಪ್ರೇಮಿ, ಬುರ್ಖಾ ತೊಟ್ಟು ಚಿಕ್ಕಮಗಳೂರು ನಗರದಲ್ಲಿ ಓಡಾಟ ನಡೆಸಿದ್ದ.ಕೈ ಬೆರಳು, ಕಾಲು ನೋಡಿ ಅನುಮಾನಗೊಂಡ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡು ಗೂಸಾ ನೀಡಿದರು. ಈತ ಬಾಳೆಹೊನ್ನೂರು ಮೂಲದ ಯುವಕನೆಂದು ತಿಳಿದು ಬಂದಿದೆ.
ಹುಡುಗಿ ನೋಡಲು ಬುರ್ಖಾ ಧರಿಸಿ ಬಂದಿದ್ದಾಗಿ ಆತ ಹೇಳಿದ್ದಾನೆ. ಬುರ್ಖಾ ಒಳಗೆ ಚಾಕು ಇಟ್ಟುಕೊಂಡಿದ್ದ. ಯುವಕನನ್ನು ಸ್ಥಳೀಯರು
ಪೊಲೀಸರಿಗೆ ಒಪ್ಪಿಸಿದ್ದಾರೆ.
ಹುಡುಗಿಗಾಗಿ ಈತ ಬಾಳೆಹೊನ್ನೂರಿನಲ್ಲಿ ಬುರ್ಖಾ ಖರೀದಿಸಿದ್ದ. ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸರಿಂದ ಯುವಕನ ವಿಚಾರಣೆ ನಡೆಯುತ್ತಿದೆ.