1:07 AM Wednesday27 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಭೂಸಂತ್ರಸ್ತರ ಹೋರಾಟ 600ನೇ ದಿನಕ್ಕೆ: ಕುಡತಿನಿ ಪಟ್ಟಣ ಸ್ವಯಂಪ್ರೇರಿತ ಬಂದ್

07/08/2024, 00:08

ಗಣೇಶ ಇನಾಂದಾರ ಬಳ್ಳಾರಿ

info.reporterkarnataka@gmail.com

ಕೈಗಾರಿಕೆ ಉದ್ದೇಶಕ್ಕಾಗಿ ವಶಕ್ಕೆ ಪಡೆಯಲಾದ ಭೂಮಿಗೆ ಪ್ರತಿಯಾಗಿ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕುಡತಿನಿ ಭೂಸಂತ್ರಸ್ತ ಹೋರಾಟಗಾರರು ನಡೆಸುತ್ತಿದ್ದ ಪ್ರತಿಭಟನೆಯು 600ನೇ ದಿನ ತಲುಪಿದೆ. ಇದರ ಅಂಗವಾಗಿ ಸಂಘಟನೆಗಳು
ಸ್ವಯಂಪ್ರೇರಿತ ಬಂದ್ ನಡೆಸಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು. ಬಸವರಾಜ್ ಅವರು ಮಾತನಾಡಿ, ಕೈಗಾರಿಕೆ ಸ್ಥಾಪನೆಗೆ ಮಾಡಲು ಕಂಪನಿಗಳಿಗೆ ಇಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳು ಭಾರಿ ಪ್ರಮಾಣದ ಪರಿಹಾರ ಧನ ನೀಡುತ್ತವೆ. ಒಂದು ಕಂಪನಿಯವರು 40 ಸಾವಿರ ಕೋಟಿ ರೂ.ಬಂಡವಾಳ ಹೂಡಿದರೆ ಅವರಿಗೆ ಸರ್ಕಾರ ಶೇ. 30 ಸಬ್ಸಿಡಿ ನೀಡುತ್ತದೆ. ಅವರಿಗೆ 12 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರ ಕಂಪನಿಗಳಿಗೆ ನೀಡುತ್ತದೆ. ಆದರೆ ರೈತರಿಗೆ ಒಂದು ಎಕರೆಗೆ 5 ಸಾವಿರ ರೂ. ಪರಿಹಾರ ನೀಡಲು ಸರಕಾರ ಮುಂದಾಗಿಲ್ಲ. ಕಂಪನಿಗಳಿಗೆ ದೊಡ್ಡ ಪ್ರಮಾಣದ ಹಣ ನೀಡುವ ಸರಕಾರದ ಕ್ರಮವನ್ನು
ಖಂಡಿಸಿ ಈ ನಮ್ಮ ಹೋರಾಟವಿದೆ ಎಂದು ತಿಳಿಸಿದರು.
ಕುಡುತಿನಿ ಮತ್ತು ಸುತ್ತಮುತ್ತಲ ಏಳು ಗ್ರಾಮಗಳ 10 ಸಾವಿರಕ್ಕೂ ಹೆಚ್ಚು ಎಕರೆಯನ್ನು ಕೆಐಡಿಬಿ ಮೂಲಕ ಕೈಗಾರಿಕೆಗಳಿಗೆ ಸ್ವಾಧೀನ ಪಡಿಸಿಕೊಂಡು 14 ವರ್ಷ ಕಳೆದರು ಕೈಗಾರಿಕೆಗಳನ್ನು ಈವರೆಗೂ ಆರಂಭಿಸಿಲ್ಲ ಈಗಾದರೂ ಆರಂಭಿಸಬೇಕು.
ಇನ್ನೂ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಸುಪ್ರೀಂ ಕೋರ್ಟಿನ ಆದೇಶ ಪ್ರಕಾರ ಪರಿಹಾರ ನೀಡಿಲ್ಲ. ವಶಪಡಿಸಿಕೊಂಡ ಜಮೀನನ್ನು ಅಭಿವೃದ್ಧಿಪಡಿಸಿ ಶೇ. 50ರಷ್ಟು ಜಮೀನು ನೀಡಿ ಎಂದು
ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ. ಆದರೆ ಕಳೆದ 586 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಇದಕ್ಕೆ ಸರ್ಕಾರ ಸ್ಪಂದಿಸಿದೆ ಇರುವ ಕಾರಣ ಕುಡತಿನಿ ಬಂದ್ ಹೋರಾಟ ಮಾಡಬೇಕಾಯಿತು ಎಂದು ಹೇಳಿದರು.
ಬಂದ್ ನಿಮತ್ತ ಗ್ರಾಮದಲ್ಲಿ ಅಂಗಡಿ ಮುಗ್ಗಟುಗಳು, ಬ್ಯಾಂಕ್ ಗಳು, ಶಾಲೆ,ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಿಐಟಿಯು ನ ಜೆ. ಸತ್ಯಬಾಬು ಭೂಸಂತ್ರಸ್ತರಾದ ತಿಪ್ಪೇಸ್ವಾಮಿ ಜಂಗ್ಲಿ ಸಾಬ್, ಶಿವರಾಂ, ರೇಣುಕಾ ರಾಜ್ ,ದೊಡ್ಡಬಸಪ್ಪ, ಜಾನೇಕುಂಟೆ ಕೊಳಗಲ್ ಗಂಗಾಧರ ಗೌಡ
ಕನ್ನಡಪರ ಸಂಘಗಳು ಮುಖಂಡರು ಮೊದಲಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು