11:16 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ವಾಮಾಚಾರ ಆರೋಪ: ದಲಿತ ಕುಟುಂಬದ ಮೇಲೆ ಹಲ್ಲೆ; ಕಂಬಕ್ಕೆ ಕಟ್ಟಿ ಥಳಿಸಿದ ಗುಂಪು; 5 ಮಂದಿಗೆ ತೀವ್ರ ಗಾಯ

25/08/2021, 17:17

ಚಂದ್ರಾಪುರ(reporterkarnataka.com): ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಾಮಾಚಾರದ ಆರೋಪ ಹೊರಿಸಿ ದಲಿತ ಕುಟುಂಬವೊಂದರ ಮೇಲೆ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದೆ. ಚಂದ್ರಾಪುರ ಜಿಲ್ಲೆಯಿಂದ 12 ಕಿಮೀ ದೂರದಲ್ಲಿರುವ ವಾನಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ದಲಿತ ಕುಟುಂಬವನ್ನು ಗ್ರಾಮದ ಅಕ್ರಮಣಕಾರಿ ಗುಂಪು ವಾಮಾಚಾರ ಮಾಡಿದ ಶಂಕೆಯಲ್ಲಿ ಮನಸ್ಸು ಇಚ್ಛೆ ಥಳಿಸಿದೆ. ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಮೂಢನಂಬಿಕೆಗೆ ಬಲಿಯಾಗಿ ಜನರ ಗುಂಪೊಂದು
ಕಾನೂನು ಕೈಗೆತ್ತಿಕೊಂಡು ದಲಿತ ಕುಟುಂಬದೊಂದಿಗೆ ಅಮಾನುಷವಾಗಿ ನಡೆದುಕೊಂಡಿದೆ. ದಲಿತ ಕುಟುಂಬದ 7 ಮಂದಿಯನ್ನು ಗ್ರಾಮದ ಚೌಕನಲ್ಲಿ ಕರೆದುಕೊಂಡು ಹೋಗಿ ಕೈಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಇವರಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ.  ಗಂಭೀರವಾಗಿ ಗಾಯಗೊಂಡ ಚಂದ್ರಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾನವೀಯತೆಗೆ ಕಳಂಕ ತಂದಿರುವ ಈ ಘಟನೆ ನಡೆದು 24 ಗಂಟೆಗಳು ಕಳೆದರೂ ಪೊಲೀಸರು ಯಾವುದೇ ಖಚಿತ ಕ್ರಮ ಕೈಗೊಂಡಿಲ್ಲ. ಘಟನೆ ಬೆಳಕಿಗೆ ಬಂದು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ

ಪೊಲೀಸರು ಹೆಚ್ಚಿನ ವಿವರಗಳನ್ನು ಕಲೆ ಹಾಕಿ ಪ್ರಕರಣದ ಕೆಲವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಏನಿದು ಪ್ರಕರಣ?: ಸ್ಥಳೀಯ ಮಾಧ್ಯಮ ಪ್ರಕಾರ, ಕೆಲವು ದಿನಗಳ ಹಿಂದೆ ಹಳ್ಳಿಯಲ್ಲಿ ಎರಡು ಅಥವಾ ಮೂರು ಮಹಿಳೆಯರ ಮೈ ಮೇಲೆ ದೇವಿ ಬಂದಿದ್ದಳು. ಗ್ರಾಮದ ದಲಿತ ಸಮುದಾಯದ 8 ರಿಂದ 10 ವೃದ್ಧ ಪುರುಷರು ಮತ್ತು ಮಹಿಳೆಯರು ಗ್ರಾಮದ ಮೇಲೆ ವಾಮಾಚಾರ ಮಾಡಿದರು ಎಂದು ಮೈ ಮೇಲೆ ದೇವಿ ಬಂದ ಮಹಿಳೆಯರು ಹೇಳಿದ್ದರು. ಈ ವಿಷಯ ಬೆಳಕಿಗೆ ಬಂದ ತಕ್ಷಣ, ಗ್ರಾಮದ ಅಕ್ರಮಣಕಾರಿ ಗುಂಪಿನ ಕೆಲ ಜನರು ಸಂಬಂಧಪಟ್ಟ ಎಲ್ಲರನ್ನೂ ಗ್ರಾಮದ ಚೌಕಕ್ಕೆ ಕರೆತಂದರು. ಇಲ್ಲಿನ ಕಂಬಳಿಗೆ ಕೈ ಕಾಲುಗಳನ್ನು ಕಟ್ಟಿ ಅವರನ್ನು ಹೊಡೆದಿದ್ದಾರೆ. 

 ದಲಿತ ಸಮುದಾಯದವರನ್ನು ಹೊಡೆಯುತ್ತಿರುವಾಗ ಗ್ರಾಮಸ್ಥರು ಭಯಭೀತರಾಗಿದ್ದರು ಮತ್ತು ಮೂಕ ಪ್ರೇಕ್ಷಕರಾಗಿದ್ದರು. ಇದರಿಂದಾಗಿ ಯಾರೂ ಕೂಡ ಈ ಬಗ್ಗೆ ಬಾಯಿ ಬಿಡಲಿಲ್ಲ. ಘಟನೆ ಬೆಳಕಿಗೆ ಬಂದ ನಂತರ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಗಡಚಂದೂರಿನ ಉಪವಿಭಾಗದ ಪೊಲೀಸ್ ಅಧಿಕಾರಿ ಸುಶೀಲ್ ಕುಮಾರ್ ನಾಯಕ್, “ವಾನಿ ಖುರ್ದ್ ಹಳ್ಳಿಯಲ್ಲಿ ಒಂದು ಕುಟುಂಬದ ಮೇಲೆ ವಾಮಾಚಾರ ಮಾಡುತ್ತಿರುವ ಬಗ್ಗೆ ಸಂಶಯವಿತ್ತು. ಅವರನ್ನು ಥಳಿಸಲಾಯಿತು. ಪೊಲೀಸರು ಹೋಗಿ ಅವರನ್ನು ರಕ್ಷಿಸಿದರು.  ಈ ನಿಟ್ಟಿನಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.  ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು