3:53 PM Wednesday14 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ತಲೆಖಾನ: ಗಂಡುಗಲಿ ಕುಮಾರರಾಮ ಜಯಂತಿ ಆಚರಣೆ: ಸಮಾಧಿ ಸ್ಥಳದಲ್ಲಿ ಭಾವಪೂರ್ಣ ನುಡಿನಮನ

25/08/2021, 09:43

ವಿರುಪಾಕ್ಷ ಸ್ವಾಮಿ ಸಾಲುಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮುಸ್ಕಿ ತಾಲೂಕಿನ ತಲೆಕಾನ್ ಗ್ರಾಮದಲ್ಲಿ ಸುಲ್ತಾನರಿಗೆಸಿಂಹಸ್ವಪ್ನವಾಗಿ 64 ಯುದ್ಧ ತಂತ್ರ ನಿಪುಣನಾಗಿದ್ದ ಗಂಡುಗಲಿ ಕುಮಾರರಾಮ ಅವರ ಜಯಂತಿ ಆಚರಿಸಲಾಯಿತು.

ದಕ್ಷಿಣ ಭಾರತದಲ್ಲಿ ಶೌರ್ಯ ಪರಾಕ್ರಮ ಮೆರೆದ, ಕನ್ನಡ ನಾಡಿನ ನೆಲ- ಜಲ-  ಭಾಷೆ- ಸಂಸ್ಕೃತಿ ಉಳಿಸಲು ಹೋರಾಡಿದ ವೈರಿಗಳಿಗೆ ಸಿಂಹಸ್ವಪ್ನ ನಾದ ಗಂಡುಗಲಿ ಕುಮಾರರಾಮ ಜಯಂತಿಯನ್ನು ಪೂಜ್ಯ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ತಲೆಖಾನ್ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಸ್ಕಿಹಾಳ ವಾಲ್ಮೀಕಿ ಮಠದ ಶ್ರೀ ಆತ್ಮಾನಂದ ಸ್ವಾಮೀಜಿಗಳು ಗ್ರಾಮದ ಸಮಾಧಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ,

 ವಾಲ್ಮೀಕಿ ಕುಲ ತಿಲಕ ಕುಮಾರರಾಮ ಪರನಾರಿ ಸಹೋದರತ್ವ ಭಾವನೆಯ ಆದರ್ಶಗಳನ್ನು ಸಂಸ್ಕೃತಿ, ಆಚಾರ ವಿಚಾರಗಳನ್ನು ಇಂದಿನ ಯುವ ಜನಾಂಗ ರೂಢಿಸಿಕೊಳ್ಳಬೇಕು. ಆತನ ಪರಾಕ್ರಮ, ಜನಪರ ಆಡಳಿತ ವೈಖರಿ, ಯುದ್ಧ ನೀತಿ, ಮಾನವೀಯ ಮೌಲ್ಯಗಳನ್ನು ಹೊಂದಿದ್ದನು. ಇಂತಹ ಮಹಾನ್ ವೀರನ ದೇಶ ಭಕ್ತಿ ನಾಡಿನ ರಕ್ಷಣೆಗಾಗಿ ಪ್ರಾಣ ಬಲಿದಾನ ಮಾಡಿದ್ದಾರೆ. ವಾಲ್ಮೀಕಿ ಸಮಾಜದ ಅದೆಷ್ಟೋ ರಾಜರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ತ್ಯಾಗ ಮಾಡಿದ ಸಮಾಜಕ್ಕೆ ಇಂದಿನ ಸರ್ಕಾರ ಸಮಾಜದ ಎಲ್ಲ ರೀತಿಯ ಸಹಕಾರ ಪಡೆದು ಮೀಸಲಾತಿಯಲ್ಲಿ ಮೀನಮೇಷ ಮಾಡುತ್ತಿರುವದು ವಿಷಾದನೀಯ ಸಂಗತಿಯಾಗಿದೆ. ಇನ್ನಾದರೂ ಈ ಸರ್ಕಾರ ಧೋರಣೆಯಿಂದ ಮುಕ್ತವಾಗುತ್ತಾ ಅಥವಾ ಮುಂದುವರಿಯುತ್ತಾ ಕಾದು ನೋಡಬೇಕಾಗಿದೆ ಎಂದು ಹೇಳಿದರು.

ನಂತರದಲ್ಲಿ ವಾಲ್ಮೀಕಿ ಸಮಾನ ಮನಸ್ಕರ ಸಂಘಟನೆ ಮುಖಂಡರಾದ ಅಶೋಕ ದಿದ್ದಿಗಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೊಲ್ಲ ಕುದುರೆ ಸವಾರಿ ಕುಮಾರರಾಮ ಜೀವನವ ಹಿನ್ನೆಲೆ, ರಾಜನೀತಿ ಬಗ್ಗೆ ಮಾತನಾಡಿದರು.

ಈ ಸಂದರ್ಭ ಶೇಖರಗೌಡ ಕಾಟಗಲ್ಲ, ಬಸವರಾಜ ತುಕ್ಕಲದಿನ್ನಿ, ಸೇತುರಾಮ ನಾಯಕ ಗೌಡೂರು,  ಕನಕಪ್ಪ ತಲೆಖಾನ, ರಮೇಶ ತಲೆಖಾನ,ಸೋಮಣ್ಣ ಲಿಂಗಸುಗೂರು, ಸೋಮಶೇಖರ ಸಿಂಧನೂರು, ಗ್ವಾಲಪ್ಪ ಉಸ್ಕಿಹಾಳ, ವೆಂಕಟೇಶ, ಅಮರೇಶ,ಜಕ್ಕಪ್ಪ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು