ಇತ್ತೀಚಿನ ಸುದ್ದಿ
ಗ್ರಾಮೀಣಾಭಿವೃದ್ಧಿ ಕಟ್ಟಡದ ಲಿಫ್ಟ್ ಒಳಗೆ ಶಾಸಕರು ಇದ್ದಂತೆ ಲಿಫ್ಟ್ ಕೈ ಕೊಡ್ತಾ..!!??
28/07/2024, 13:15
ರಶ್ಮಿ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಸುಮಾರು 13.5 ಕೋಟಿ ರೂ. ವೆಚ್ಚದಲ್ಲಿ ಕಟ್ಟಲಾದ ಗ್ರಾಮೀಣಾಭಿವೃದ್ಧಿ ಕಟ್ಟಡದ ಬಗ್ಗೆ ಈಗಾಗಲೇ ಹಲವು ವಿಷಯಗಳು ಚರ್ಚೆ ಆಗಿದ್ದವು. ಅದರಲ್ಲೂ ಮಳೆಗಾಲದಲ್ಲಿ ಸೋರುವುದು, ತಂಡಿ ಬರುತ್ತಿರುವುದು ಹೀಗೆ ಹಲವು ಕಾಮಗಾರಿಗಳ ಬಗ್ಗೆ ಇದೊಂದು ಅವೈಜ್ಞಾನಿಕ ಕಾಮಗಾರಿ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಅದು ಬರಿ ಆರೋಪಕ್ಕೆ ಸೀಮಿತವಾಗದೆ ಟಿವಿ ಮಾಧ್ಯಮ, ಪತ್ರಿಕೆ, ಡಿಜಿಟಲ್ ಮಾಧ್ಯಮ ಹೀಗೆ ಎಲ್ಲದರಲ್ಲೂ ಸುದ್ದಿ ಪ್ರಸಾರವಾಗಿತ್ತು. ಈ ಸುದ್ದಿಗಳಲ್ಲಿ ಗ್ರಾಮೀಣಾಭಿವೃದ್ಧಿ ಕಟ್ಟಡದ ಲಿಫ್ಟ್ ಬಗ್ಗೆ ಕೂಡ ಕೆಲವೊಂದು ಮಾಧ್ಯಮ ಲಿಫ್ಟ್ ಕೆಲಸ ನಿರ್ವಹಿಸದೆ ಇರುವ ಬಗ್ಗೆ ಉದ್ಘಾಟನೆ ಆಗಿ ಎರಡು ತಿಂಗಳಲ್ಲೇ ಕೆಟ್ಟು ನಿಂತ ಲಿಫ್ಟ್ ಎಂಬ ಶಿರೋನಾಮೆಯಡಿಯಲ್ಲಿ ವರದಿ ಕೂಡ ಮಾಡಿದ್ದವು.
ಕೆಲವು ವೃದ್ಧರಿಗೆ ಮೆಟ್ಟಿಲು ಹತ್ತಲು ಸಮಸ್ಯೆ ಆಗುತ್ತಿದೆ.ಲಿಫ್ಟ್ ಸರಿಪಡಿಸಿ ಎಂದು ಸುದ್ದಿ ಕೂಡ ಪ್ರಸಾರ ಮಾಡಿದ್ದವು.
ಆದರೆ ಶನಿವಾರ ಗ್ರಾಮೀಣಾಭಿವೃದ್ಧಿ ಕಟ್ಟಡದಲ್ಲಿ ಅತಿವೃಷ್ಟಿಯಿಂದ ಆದ ಮಳೆ ಹಾನಿಗಳ ಕುರಿತಾಗಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಬೇಕಾಗಿದ್ದ ಶಾಸಕರು ಬರುವುದು 10 ನಿಮೀಷ ತಡವಾಗಿತ್ತು. ಸಭೆಗೆ ಬಂದ ಎಲ್ಲಾ ಅಧಿಕಾರಿಗಳು, ಪತ್ರಿಕಾ ಮಧ್ಯಮದವರು ಶಾಸಕರಿಗಾಗಿ ಕಾಯುತ್ತ ಕುಳಿತಿದ್ದರು. ಆದರೆ ಶಾಸಕರು ಕೆಳಗಡೆಯಿಂದ ಮೇಲ್ಭಾಗದ 4ನೇ ಮಹಡಿಗೆ ಮೆಟ್ಟಿಲು ಹತ್ತಿ ನಡೆದುಕೊಂಡೆ ಬಂದರು.
ಸಭೆಗೆ ಬರಲು ಸುಮಾರು 10 ನಿಮಿಷ ತಡವಾಗಿತ್ತು. ನಂತರ ಶಾಸಕರು ಬಂದರು. ಸಭೆ ಮುಗಿದ ನಂತರ ಶಾಸಕರು ತಡವಾಗಿ ಸಭೆಗೆ ಬರಲು ಕಾರಣ ಏನು ಎಂದು ತಿಳಿದ ವಿಷಯ ಲಿಫ್ಟ್ ಕೈ ಕೊಟ್ಟಿತ್ತು ಎಂದು, ಕರೆಂಟ್ ಹೋಗಿ ಲಿಫ್ಟ್ ನಿಂತಿತ್ತೋ? ಅಥವಾ ಮಿಷನ್ ದುರಸ್ಥಿಗೊಂಡು ನಿಂತಿದ್ದೋ? ಗೊತ್ತಾಗಲಿಲ್ಲ.
ಆದರೆ 10 ನಿಮಿಷ ಶಾಸಕರು ಲಿಫ್ಟ್ ಒಳಗೆ ಸಿಲುಕಿಕೊಂಡಿದ್ದರು ಎಂದು ಅಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಿಳಿಸಿದ್ದು ಲಿಫ್ಟ್ ನಂಬಿ ಉಸಿರು ಕಟ್ಟಿ ಜೀವ ಕಳೆದು ಕೊಳ್ಳುವುದಕ್ಕಿಂತ ದೇವರು ಕೊಟ್ಟ ಕಾಲಿನಿಂದ ಮೆಟ್ಟಿಲು ಹತ್ತಿ ಹೋಗುವುದೇ ಒಳ್ಳೆಯದು ಎಂಬ ಮಾತುಗಳು ಸಭೆಯಲ್ಲಿ ಭಾಗಿಯಾಗಿದ್ದ ಕೆಲವು ಮಂದಿಯಿಂದ ಕೇಳಿ ಬಂದಿತ್ತು.