ಇತ್ತೀಚಿನ ಸುದ್ದಿ
ಧಾರಾಕಾರ ಮಳೆ: ತೀರ್ಥಹಳ್ಳಿ ರಥಬೀದಿಯಲ್ಲಿ ಮನೆ ಗೋಡೆ ಕುಸಿತ
27/07/2024, 00:04
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ತಾಲೂಕಿನಾದ್ಯಂತ ಪುಷ್ಯ ಮಳೆಯ ಹೆಚ್ಚಾಗಿದ್ದು, ಭಾರಿ ಮಳೆ ಹಾಗೂ ಗಾಳಿಯಿಂದ ಮನೆಯೊಂದರ ಗೋಡೆ ಕುಸಿದು ಬಿದ್ದ ಘಟನೆ ಪಟ್ಟಣದ ರಥಬೀದಿಯಲ್ಲಿ ನಡೆದಿದೆ.
ರಥಬೀದಿಯ ತಿರುಮಲ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರು ಇರುವ ಸ್ಫೂರ್ತಿ ಕಿರಣ್ ಎಂಬುವರ ಮನೆಯ ಗೋಡೆ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದೆ. ಮನೆಯ ಮೇಲ್ಭಾಗದ ಗೋಡೆಯಾಗಿದ್ದು ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.
ಘಟನ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳಾದ ಲೋಕೇಶ್ ಸೇರಿದಂತೆ ಅನೇಕ ಅದಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗಮನಿಸಿ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.