2:10 PM Wednesday14 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಮಂಗಳೂರು ಭಂಡಾರಿ ಸಮಾಜ ಸಂಘದಿಂದ ‘ಆಟಿಡೊಂಜಿ ದಿನ’: 46 ಬಗೆಯ ತಿಂಡಿ ತಿನಿಸುಗಳ ವೈಭವ

24/07/2024, 19:44

ಮಂಗಳೂರು(reporterkarnataka.com): ಮಂಗಳೂರು ಭಂಡಾರಿ ಸಮಾಜ ಸಂಘ ಮತ್ತು ಮಂಗಳೂರು ಭಂಡಾರಿ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಸಾರುವ ಆಟಿಡೊಂಜಿ ದಿನ (ಆಷಾಢ ಮಾಸದ ಒಂದು ದಿನ) ಕಾರ್ಯಕ್ರಮ ನಗರದ ಕದ್ರಿಯ ಸುಮ ಸದನದಲ್ಲಿ ಭಾನುವಾರ ನಡೆಯಿತು.

ಸಂಘದ ಅಧ್ಯಕ್ಷ ಮುರಳೀಧರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ತೆಂಗಿನ ಮರದ ಹಿಂಗಾರವನ್ನು ಅರಳಿಸಿ ಉದ್ಘಾಟಿಸಿದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಕರಾವಳಿ ಅವರು ಮಾತನಾಡಿ, ಅಂದಿನ ಕಾಲದಲ್ಲಿ ಆಷಾಡ ಮಾಸದಲ್ಲಿ ನಾವು ತಯಾರಿಸುತ್ತಿದ್ದ ತಿಂಡಿ ತಿನಿಸುಗಳು, ಆ ಸಂಸ್ಕೃತಿ ಈಗಿನ ಯುವಕರಲ್ಲಿ ಕ್ರಮೇಣ ಮರೆಯಾಗುತ್ತಿದೆ. ಅದನ್ನು ನೆನಪಿಸಲು ಪ್ರತೀ ವರ್ಷ ಇಂತಹ ಕಾರ್ಯಕ್ರಮವನ್ನು ನಮ್ಮ ಸಂಘಗಳು ಆಯೋಜಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದರು.
ಇಂತಹ ಕಾರ್ಯಕ್ರಮಗಳಲ್ಲಿ ಯುವಕರು ಸಾಧ್ಯವಾದಷ್ಟು ಪಾಲ್ಗೊಂಡು ಹಿಂದಿನ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಹಿರಿಯರ ಆಚರಣೆಗಳ ಬಗ್ಗೆ ತಮ್ಮ ಮಕ್ಕಳಿಗೆ ತಿಳಿಸುವ ಮೂಲಕ ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾದ ಭಂಡಾರಿ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಅವರು ಮಾತನಾಡಿ, ಸಮಾಜದಲ್ಲಿ ಇಂತಹ ಕಾರ್ಯಕ್ರಮ ನಡೆಯುವಾಗ ಬಂಧುಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಭಂಡಾರಿ ಸಮಾಜ ಸಂಘ ಮಂಗಳೂರು ಸಂಘದ ಸ್ವಂತ ಜಾಗದಲ್ಲಿ ಭಂಡಾರಿ ಸಭಾಭವನ ನಿರ್ಮಾಣ ಮಾಡುವ ಯೋಜನೆ ಹಾಕಿದರೆ ಅದಕ್ಕೆ ಮುಂಬೈಯ ಸಮಾಜ ಬಾಂಧವರಿಂದ ಮತ್ತು ವೈಯಕ್ತಿಕವಾಗಿ 2 ಕೋಟಿ ಧನ ಸಹಾಯ ದೊರಕಿಸಿ ಕೊಡುತ್ತೇನೆ. ಅದೇ ರೀತಿ ಸಮಾಜದ ಇನ್ನೊಬ್ಬ ಬಂಧುವಿನ ಮೂಲಕ 50 ಲಕ್ಷ ದೊರಕಿಸಿಕೊಡುವುದಾಗಿ ಆಸ್ವಾಸನೆ ನೀಡಿದರು. ಸಭಾ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು.
ಆಹಾರ ಮತ್ತು ಆರೋಗ್ಯದ ಬಗ್ಗೆ ಉಡುಪಿಯ ಉದ್ಯಾವರ ಎಸ್. ಡಿ ಎಮ್. ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಮತಾ ಕೆ. ವಿ. ಮಾತನಾಡಿ, ಹಿಂದೆ ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕೃಷಿಕರಿಗೆ ಮನೆಯ ಉಪ್ಪರಿಗೆಯಲ್ಲಿ ಅಕ್ಕಿ ಮುಡಿ ಇದ್ದರೆ ಮಾತ್ರ ಊಟ ಇಲ್ಲದಿದ್ದರೆ, ಗಂಜಿ ನೀರೇ ಗತಿ.
ಮಾವಿನಕಾಯಿ, ಸೌತೆಕಾಯಿ, ಹಲಸಿನ ಕಾಯಿ ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿ ಮಳೆಗಾಲದಲ್ಲಿ ಇದರ ಪದಾರ್ಥ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಭಂಡಾರಿ ಮಹಾಮಂಡಲದ ಅಧ್ಯಕ್ಷ ಶಶಿಧರ ಕಾರ್ಕಳ,
ಭಂಡಾರಿ ಸ್ವಯಂಸೇವಕ ಸಂಘದ ಅಧ್ಯಕ್ಷೆ ರಾಜೀವಿ ಮೂಡುಶೆಡ್ಡೆ, ಅಧ್ಯಕ್ಷ ಮುರಳೀಧರ ಭಂಡಾರಿ ಮತ್ತು ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ಮಾಲೆಮಾರ್ ಉಪಸ್ಥಿತರಿದ್ದರು. ಸುಮಾರು 46 ಬಗೆಯ ತಿಂಡಿ ತಿನಿಸುಗಳು ಇದ್ದವು. ಹಳೆಯ ಕಾಲದ ಕೃಷಿ ಸಲಕರಣೆಯ ಸಾಮಗ್ರಿಗಳು, ಅಕ್ಕಿ ಮಡಿ, ಚಿನ್ನೆ ಮನೆ, ಅನ್ನ ಬಸಿಯುವ ಮರಾಯಿ, ಕಲಶೆ, ಸೇರು, ಪಾವು ವಿವಿಧ ಬಗೆಯ ಮಣ್ಣಿನ ಪಾತ್ರೆಗಳು ಇನ್ನಿತರ ಹಳೆಯ ಕಾಲದ ವಸ್ತುಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು.
ಪದ್ಮನಾಭ ಎಂ. ಸ್ವಾಗತಿಸಿದರು. ಅನಿತಾ ಅಮರನಾಥ್, ಧನ್ಯಾ ಸುರತ್ಕಲ್ , ದಿವ್ಯ ಲತಾ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ವಾಣಿ ಎಸ್. ಭಂಡಾರಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು