ಇತ್ತೀಚಿನ ಸುದ್ದಿ
ಕುದ್ರೋಳಿ ಯುವಕ ಸಂಘದ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಆಯ್ಕೆ
17/07/2024, 23:46

ಮಂಗಳೂರು(reporterkarnataka.com)::ಕುದ್ರೋಳಿ ಯುವಕ ಸಂಘದ 62ನೇ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸಂಘದಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಅಶೋಕ್ ಕುಮಾರ್ ಕೆ. ವಹಿಸಿದ್ದರು. ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರಾಜೇಶ್ ಕುದ್ರೋಳಿ ಮಂಡಿಸಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿ ಕೆ. ದಿನೇಶ್ ಅಂಚನ್ ಮಂಡಿಸಿದರು.
2024-25ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಶೋಕ್ ಕುಮಾರ್ ಕೆ, ಅಧ್ಯಕ್ಷರಾಗಿ ಆಯ್ಕೆಗೊಂಡರು. ಗೌರವ ಅಧ್ಯಕ್ಷರಾಗಿ ಶಂಕರ ಬರ್ಕೆ, ಉಪಾಧ್ಯಕ್ಷರಾಗಿ ರವೀಂದ್ರಆರ್.ಆರ್., ಕಾರ್ಯದರ್ಶಿಯಾಗಿ ರಾಜೇಶ್ ಕುದ್ರೋಳಿ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ಕೋಶಾಧಿಕಾರಿಯಾಗಿ ಕೆ. ದಿನೇಶ್ ಅಂಚನ್, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ರವಿ ಅಮೀನ್, ಕಲಾ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಜೊತೆ ಕಲಾ ಕಾರ್ಯದರ್ಶಿಯಾಗಿ ಸುರೇಂದ್ರ ಶೆಟ್ಟಿಗಾರ್, ಕಚೇರಿ ಕಾರ್ಯದರ್ಶಿಗಳಾಗಿ ನಾಗರಾಜ್ ಹಾಗೂ ಯಾದವ ಅವರು ಆಯ್ಕೆಗೊಂಡರು. ಸಮಿತಿ ಸದಸ್ಯರುಗಳಾಗಿ ದೇಜು ಅಂಚನ್, ಮಿತ್ರಹೆರಾಜೆ, ನಾರಾಯಣ ಕರ್ಕೇರ, ಪ್ರಮೋದ್ ಕುದ್ರೋಳಿ ರವೀಂದ್ರ ಅಮೀನ್ ಹಾಗೂ ಕಿಶೋರ್ ಕುಮಾರ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಮಹಿಳಾ ಸಮಿತಿಯ ಸಂಚಾಲಕಿಯಾಗಿ ಸುಮನ್ ಸುನಿಲ್, ಸಹ ಸಂಚಾಲಕಿಯಾಗಿ ಭಾನುಮತಿ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಹಿರಿಯ ಸದಸ್ಯರಾದ ಮಿತ್ರಹೆರಾಜೆ ಹಾಗೂ ಕೃಷ್ಣಪ್ಪ ಗಟ್ಟಿ ಮತ್ತು ಸುನೀಲ್ ಕುಮಾರ್ ಅವರು ಮಾತನಾಡಿ ಎಲ್ಲಾ ಸದಸ್ಯರು ಸಂಘದ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ಹಾಕಿಕೊಂಡು ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಸಂಘದ ಅಧ್ಯಕ್ಷರು ಮಾತನಾಡಿ ಸಂಘದ ಎಲ್ಲಾ ಕೆಲಸ ಕಾರ್ಯಕ್ಕೆ ಸಂಘದ ಎಲ್ಲ ಸದಸ್ಯರ ಸಹಕಾರ ಕೇಳಿದರು. 61ನೇ ವಾರ್ಷಿಕೋತ್ಸವ ಹಾಗೂ ಲಕ್ಕಿಡಿಪ್ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ಕಾರ್ಯದರ್ಶಿ ರಾಜೇಶ್ ಕುದ್ರೋಳಿ ವಂದಿಸಿದರು.