11:10 PM Sunday24 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಮುಸ್ಲಿಮರೇ ಇಲ್ಲದ ಊರಲ್ಲಿ ಭಕ್ತಿ- ಸಂಭ್ರಮದಿಂದ ಮೊಹರಂ ಆಚರಣೆ: ಇಡೀ ರಾಜ್ಯದ ಗಮನ ಸೆಳೆದ ಮಸ್ಕಿಯ ಅಂತರಗಂಗೆ

17/07/2024, 23:37

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರ ಒಬ್ಬರೂ ಇರದಿದ್ದರೂ ಇಂದು ಗ್ರಾಮದಲ್ಲಿ ಮೊಹರಂ ಆಚರಣೆ ಅದ್ದೂರಿಯಾಗಿ ನಡೆಯಿತು.
ಮೊಹರಂ ವಿಶೇಷ ಹಬ್ಬ .ಈ ಗ್ರಾಮದಲ್ಲಿ ಸತತವಾಗಿ ಮುಸ್ಲಿಂ ಇರದಿದ್ದರೂ ಬೇರೆ ಪಟ್ಟಣದಿಂದ ಮುಸ್ಲಿಮ್ಸ್ ಪೂಜೆ ಮಾಡುವರನ್ನು ಕರೆಸಿ ಭಾವೈಕ್ಯತೆ ಮೊಹರಂ ಹಬ್ಬ ಆಚರಣೆ ಮಾಡಲಾಯಿತು. ಯಾವುದೇ ಗಲಾಟಿ ಇಲ್ಲದೆ ಶಾಂತಿಯುತವಾಗಿ ನೆರವೇರಿತು.


ಭಕ್ತರು ತಮ್ಮ ಹರಕೆಗಳನ್ನು ತೀರಿಸುತ್ತಾ ಮೊಹರಂ ದೇವರಿಗೆ ಮಡಿ ಬಟ್ಟಿ ಹಾಗೂ ತಮ್ಮ ಹರಕೆಗಳನ್ನು ತೀರಿಸುತ್ತಾ. ಅಲೈ ಕುಣಿಯುತ್ತ ಔಷನ ಭವಿಷ್ಯನ ಬೆಂಬಲಾಯಿಮು ದೀನ್ ಎನ್ನುವ ವಾಕ್ಯದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ದೇವರು ಹೇಳುವ ಸಂದರ್ಭದಲ್ಲಿ ಕುಂಬಾರ ಮನೆಗೆ ಹೋಗಿ ವಿಶೇಷ ಪೂಜೆಯೊಂದಿಗೆ ಮತ್ತೆ ಮಸೂದಿಗೆ ಬಂದು ಸಾಯಂಕಾಲ 5:00 ಗಂಟೆಗೆ ಹಿಂದೂ ಮುಸ್ಲಿಂ ಭಾವೈಕ್ಯತೆ ಸಂಭ್ರಮದ ಗ್ರಾಮೀಣ ಭಾಗದ ಅಂತರಗಂಗೆಯಲ್ಲಿ ಯಾವುದೇ ತಕರಾರು ಗಲಾಟೆ ಇಲ್ಲದೆ ಶಾಂತಿಯುತವಾಗಿ ಮೊಹರಂ ಆಚರಣೆ ಮಾಡಲಾಯಿತು. ಊರಿನ ಮುಖಂಡರು ಗ್ರಾಮಸ್ಥರು ಹಾಗೂ ಯುವಕರು ಮೊಹರಂ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು