ಇತ್ತೀಚಿನ ಸುದ್ದಿ
ಭಾರೀ ಮಳೆಗೆ ಅಂಗಳ ಕುಸಿತ: 2 ಕುಟುಂಬಗಳ ರಾತೋರಾತ್ರಿ ಸ್ಥಳಾಂತರ; 8 ವರ್ಷಗಳಿಂದ ಇದೇ ಗೋಳು
16/07/2024, 20:56
ಶಶಿ ಬೆತ್ತದಕೊಳಲು ಕೊಪ್ಪ
info.reporterkarnataka@gmail.com
ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡೆತೋಟದಲ್ಲಿ 17 ಮನೆಗಳು ಸುಮಾರು 8 ವರ್ಷದಿಂದ ಅಪಾಯದಲ್ಲಿದ್ದು, ಅದರಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಮನೆಯೊಂದರ ಮುಂಭಾಗದ ಅಂಗಳ ಕುಸಿದಿದ್ದು ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ರಾತ್ರಿ ಸುಮಾರು 10.30ಕ್ಕೆ ನಾರಾಯಣ ಮತ್ತು ಐತ್ತಪ್ಪ ಅವರ ಕುಟುಂಬವನ್ನು ಪಂಚಾಯತಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.
ಕೊಪ್ಪ ತಹಶೀಲ್ದಾರ್ ಹುಸೇನ್, ಅರಣ್ಯ ನೂಡಲ್ ಅಧಿಕಾರಿ ರಂಗನಾಥ್, ಕೊಪ್ಪ ಇಓ ನವೀನ್, ಎಐ ಸುಧೀರ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ 8 ವರ್ಷಗಳಿಂದ ಮಳೆಗಾಲದಲ್ಲಿ ಮಾತ್ರ ಪರ್ಯಾಯ ವ್ಯವಸ್ಥೆ ಮಾಡುತ್ತಾ ಬಂದಿದ್ದು ಇದುವರೆಗೂ ಶಾಶ್ವತ ಪರಿಹಾರ
ನೀಡಿಲ್ಲ.
ಈ ಬಾರಿ ಶಾಶ್ವತ ಪರಿಹಾರ ಸಿಗದೆ ಇದ್ದರೆ ಮುಂದಿನ ವರ್ಷವೂ ಇದೇ ಆದರೆ ನಾವು ಅದೇ ಮನೆಯಲ್ಲಿ ಸಾಯುತ್ತೇವೆಯೆ ಹೊರತು ಮನೆ ಖಾಲಿ ಮಾಡುವುದಿಲ್ಲ..
ನಮಗೆ ಏನೇ ಅದರೂ ಸರ್ಕಾರವೇ ಹೊಣೆ ಎನ್ನುತ್ತಿದ್ದಾರೆ ನಾರಾಯಣ ಮತ್ತು ಐತಪ್ಪ ಕುಟುಂಬದವರು.
ಈಗ ಸದ್ಯ ಪಂಚಾಯತಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದ್ದು ಅವರಿಗೆ ಬೇಕಾದ ಕೆಲ ವ್ಯವಸ್ಥೆಗಳನ್ನು ಪಂಚಾಯಿತಿ ವತಿಯಿಂದ ಮಾಡಲಾಗಿದೆ.