ಇತ್ತೀಚಿನ ಸುದ್ದಿ
ಮಂಗಳೂರಿನ ಸೈಂಟ್ ಆನ್ಸ್ ಕಮ್ಯೂನಿಟಿ ಕಾಲೇಜಿನಲ್ಲಿ ಮೌಂಟ್ ಕಾರ್ಮೆಲ್ ದಿನಾಚರಣೆ
14/07/2024, 16:12
ಮಂಗಳೂರು(reporterkarnataka.com): ಮಂಗಳೂರಿನ ಸೈಂಟ್ ಆನ್ಸ್ ಕಮ್ಯೂನಿಟಿ ಕಾಲೇಜಿನಲ್ಲಿ ಮೌಂಟ್ ಕಾರ್ಮೆಲ್ ದಿನಾಚರಣೆ ಇಂದು ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ವಿನುತಾ ಅವರು ಮೌಂಟ್ ಕಾರ್ಮೆಲ್ ಮಾತೆಗೆ ಪುಷ್ಪಾರ್ಚನೆ ಮಾಡಿ ಮೌಂಟ್ ಕಾರ್ಮೆಲ್ ದಿನದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸಿ. ನಿರ್ಮಲಾ, ಅಸುಮ್ತಾ ಡಿ ಸೋಜಾ, ಶರ್ಲಿನ್, ಪ್ರತಿಭಾ ಮುಂತಾದವರು ಉಪಸ್ಥಿತರಿದ್ದರು.