12:44 AM Sunday11 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ರೋಟರಿ ಕ್ಲಬ್ ಮಂಗಳೂರು ಸೀಸೈಡ್ ಸಂಸ್ಥೆಯ ಪದಗ್ರಹಣ ಸಮಾರಂಭ

12/07/2024, 16:51

ಮಂಗಳೂರು(ReporterKarnataka.com)

ರೋಟರಿ ಸಂಸ್ಥೆ ವಿಶ್ವದ ಪ್ರಥಮ ಅಂತರಾಷ್ಟ್ರೀಯ ಸ್ವಯಂ ಪ್ರೇರಿತ ಸೇವಾ ಸಂಸ್ಥೆಯಾಗಿದ್ದು, ನಿಸ್ವಾರ್ಥ ಸೇವಾ ಮನೋಭವಾದಿಂದ ದುರ್ಬಲರ ಆರ್ಥಿಕ ಏಳಿಗೆಗೆ ಶ್ರಮಿಸಬೇಕು, ಅಸ್ವಸ್ಥರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿ ಜೀವನ ಶೈಲಿಯನ್ನು ಬದಲಿಸಬೇಕು ಎಂದು ರೋಟರಿ ಮಾಜಿ ಜಿಲ್ಲಾ ಗರ್ವನರ್‌ರಾದ ಡಾ.ದೇವಾದಸ್ ರೈ ಸಲಹೆ ನೀಡಿದರು.

ಅವರು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇತ್ತಿಚೆಗೆ ನಡೆದ ರೋಟರಿ ಕ್ಲಬ್ ಮಂಗಳೂರು ಸಿ ಸೈಡ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು.

ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ.ರಂಜನ್‌ ವಾರ್ತಾ ಗೃಹಪತ್ರಿಕೆ “ಸಮುದ್ರ ವಾಹಿನಿ”ಯನ್ನು ಅನಾವರಣಗೊಳಿಸಿದರು.

ವಲಯ ಅಧಿಕಾರಿ ಡಾ.ಯತೀಶ್ ಕುಮಾರ್ ಮತ್ತು ಸಂಸ್ಥೆಯ ಸಲಹೆಗಾರ ಮಾಧವ್ ಸುವರ್ಣ ಉಪಸ್ಥಿತರಿದ್ದರು.

ನಿರ್ಗಮಿತ ಅಧ್ಯಕ್ಷ ಶಿವರಾಮ್ ಸ್ವಾಗತಿಸಿ ತಮ್ಮ ಅಧಿಕಾರಾವಧಿಯಲ್ಲಿ ಸದಸ್ಯರು ನೀಡಿದ ಬೆಂಬಲ ಮತ್ತು ಸಹಕಾರವನ್ನು ಸ್ಮರಿಸಿ ಕೃತಜ್ಞತೆಯನ್ನು ಸಲಿಸಿದ್ದರು. ನಿರ್ಗಮಿತ ಕಾರ್ಯದರ್ಶಿ ಆಚನ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.

ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಹೀರಾಚಂದ್ ಕರ್ಕೇರ ತಮ್ಮ ಅಧಿಕಾರವಧಿಯಲ್ಲಿ ಹಲವಾರು ಜನಪರ ಸೇವಾಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವ ಸದ್ಯಸರ ಕೋರಿದರು. ಮನೋಹರ್ ಕದ್ರಿ ನಿರೂಪಿಸಿದರು. ನೂತನ ಕಾರ್ಯದರ್ಶಿ ಆಶೋಕ್ ವಂದಿಸಿದರು.

ಪದಾಧಿಕಾರಿಗಳ ವಿವರ : ಕೋಶಾಧಿಕಾರಿ ಅಚನ್ ಶೆಟ್ಟಿ, ದಂಡಾಧಿಕಾರಿ ಜಗಜೀವನ್ ದಾಸ್, ನಿರ್ದೇಶಕರು ನೆಲ್ಸನ್ ಗೋವಿಯಸ್ (ಸಂಸ್ಥೆ ಸೇವೆ), ಕಿರಣ್ ಕುಮಾರ್ (ವೃತ್ತಿಪರ ಸೇವೆ) ಚಂದ್ರಶೇಖರ್ (ಸಮುದಾಯ ಸೇವೆ) ಸುರೇಶ್ (ಅಂತರಾಷ್ಟ್ರೀಯ ಸೇವೆ), ಶ್ರೀಮತಿ ಸುನಂದ (ಯುವಜನ ಸೇವೆ).

ಇತ್ತೀಚಿನ ಸುದ್ದಿ

ಜಾಹೀರಾತು