ಇತ್ತೀಚಿನ ಸುದ್ದಿ
ಮಂಗಳೂರು ಸಂತ ಆನ್ಸ್ ಕಮ್ಯುನಿಟಿ ಕಾಲೇಜಿನಲ್ಲಿ ವನ ಮಹೋತ್ಸವ
10/07/2024, 20:51

ಮಂಗಳೂರು(reporterkarnataka.com): ನಗರದ ಸಂತ ಆನ್ಸ್ ಕಮ್ಯುನಿಟಿ ಕಾಲೇಜಿನಲ್ಲಿ ವನ ಮಹೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಕಾರ್ಮೆಲ್ ಶಾಲೆಯ ಮಾಜಿ ಶಿಕ್ಷಕಿ ಮಾರ್ಗರೇಟ್ ಮಾತನಾಡಿ, ಕಾಡು ಉಳಿದರ ನಾಡು ಉಳಿದಂತೆ ಎಂದರು. ಸಂಸ್ಥೆಯ ಪ್ರಾಂಶುಪಾಲೆ ಸಿ| ವಿನೂತ, ಶಿಕ್ಷಕಿಯಾದ ಸಿ| ನಿರ್ಮಲಾ, ಅಸುಂತಾ ಡಿ’ಸೋಜಾ, ಶೇರಿನ್, ಪ್ರತಿಭಾ ಮುಂತಾದವರು ಉಪಸ್ಥಿತರಿದ್ದರು.
ಎಲಿಜಬೆತ್ ಅವರು ಸ್ವಾಗತಿಸಿ, ಗಾಯತ್ರಿಯವರು ವಂದಿಸಿದರು. ಅಸ್‌ನಾ ಅವರು ನಿರೂಪಿಸಿದರು.