ಇತ್ತೀಚಿನ ಸುದ್ದಿ
ಚಿತ್ತಾಪುರ ರಾಘವೇಂದ್ರ ಮಠದಲ್ಲಿ ಶ್ರೀ ಶಂಕರ ಉಪದೇಶಾಮೃತ ಉಪನ್ಯಾಸ
09/07/2024, 19:41
ಶಿವು ರಾಠೋಡ ಚಿತ್ತಾಪುರ ಯಾದಗಿರಿ
info.reporterkarnataka@gmail.com
ಸನಾತನ ಧರ್ಮವನ್ನು ಉಳಿಸಲು ಶ್ರೀ ಶಂಕರಾಚಾರ್ಯರು ಸತತ ಹೋರಾಟ ಮಾಡಿ ಸನಾತನ ಧರ್ಮವನ್ನು ಉಳಿಸಿ ನಮ್ಮ ಸಂಸ್ಕೃತಿಯನ್ನು ಬೆಳಿಸಿದ್ದಾರೆ ಎಂದು ಶಿರಳಗಿ ತಾಲೂಕಿನ ಚೈತನ್ಯ ರಾಜಾರಾಮ್ ಕ್ಷೇತ್ರದ ಸಿದ್ದಾಪುರದ ಶ್ರೀಗಳಾದ ಶ್ರೀ ಬ್ರಹ್ಮಾನಂದ ಭಾರತಿ ತೀರ್ಥರು ಉಪನ್ಯಾಸ ನೀಡಿದರು.












ಪಟ್ಟಣದ ಬ್ರಾಹ್ಮಣ ಗಲ್ಲಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಶ್ರೀ ಶಂಕರ ಉಪದೇಶಾಮೃತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಪ್ರ ಬಾಂಧವರಿಗೆ ಉಪನ್ಯಾಸ ನೀಡಿದ ಅವರು, ಶಂಕರಾಚಾರ್ಯರು ಜಗತ್ತಿನಲ್ಲಿ ತನ್ನದೆ ಆದ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರುವ ಸನಾತನ ಧರ್ಮವನ್ನು ಉಳಿಸಲು ಅಖಂಡ ಭಾರತವನ್ನು ಒಂದು ಮಾಡಿ ನಾಲ್ಕು ದಿಕ್ಕುಗಳಲ್ಲಿ ಶಾಖಾಮಠಗಳನ್ನು ಸ್ಥಾಪನೆ ಮಾಡಿ ಅವತ್ತಿನಿಂದ ಇವತ್ತಿನ ವರೆಗೆ ಸನಾತನ ಧರ್ಮವನ್ನು ಎತ್ತಿ ಹಿಡಿದು ರಕ್ಷಣೆ ಮಾಡಿದ್ದಾರೆ. ಭಾರತದಲ್ಲಿ ಬ್ರಿಟಿಷರು, ಫ್ರೆಂಚರು, ಮೊಗಲರು ಬಂದು ಸನಾತನ ಧರ್ಮವನ್ನು ಅಳಿಸಲು ಸಾಕಷ್ಟು ಪ್ರಯತ್ನ ಮಾಡಿದರು ಅದರಂತೆ ವಿದೇಶದ ಅನೇಕ ಮತಗಳು ಸರ್ವನಾಶ ವಾಗಿ ಹೋದವು. ಆದರೆ ಸನಾತನ ಸಂಸ್ಕೃತಿ ನಾಶವಾಗಲಿಲ್ಲ. ಮತ್ತೆ ಮುಂದೆಯೂ ನಾಶವಾಗುವುದಿಲ್ಲ. ಯಾಕಂದರೆ ಯತಿ ವರಣ್ಯ ಶಂಕರಾಚಾರ್ಯರು ಎಲ್ಲವನ್ನು ಸಂಸ್ಕೃತಿಯ ಉಳಿವಿಗಾಗಿ ಸಮರ್ಪಣೆ ಮಾಡಿದ್ದಾರೆ. ಇಂಥವರಿಗೆ ಕೃತಜ್ಞತೆ ಸಲ್ಲಿಸಲು ಪೂಜೆ, ಆರಾಧನೆ, ಪ್ರಾರ್ಥನೆ ಮಾಡಿದರೆ ಸಾಲದು ಹೊರತಾಗಿ ನಮ್ಮ ಸನಾತನ ಧರ್ಮದ ಬಗ್ಗೆ, ಉಪನಿಷತ್ತು, ಭಗವದ್ಗೀತೆ,ಶ್ರೀ ಶಂಕರಾಚಾರ್ಯರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಇದರ ಅರ್ಥಗಳಿಂದ, ಶಂಕರಾಚಾರ್ಯರ ಉಪದೇಶಗಳಿಂದ, ಭಗವದ್ಗೀತೆಯ ಸಾರದಿಂದ ನಮ್ಮ ಬದುಕಿನ ಜೊತೆಗೆ ಪ್ರಪಂಚದ ಎಲ್ಲರ ಬದುರು ಸುಂದರವಾಗಿಸಲು ಸಾಧ್ಯ ಎಂದು ಉಪದೇಶ ಮಾಡಿದರು.
ಈ ಕಾರ್ಯಕ್ರಮದ ಅಂಗವಾಗಿ ಶೃತಿ ಜಾನಿಬ್, ಉಮಾ ದೇಶಪಾಂಡೆ,ಸಕ್ಕುಬಾಯಿ ಕುಲಕರ್ಣಿ ಮತ್ತು ಅನೇಕ ಮಹಿಳೆಯರಿಂದ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಶ್ರೀ ಬ್ರಹ್ಮಾನಂದ ಭಾರತಿ ತೀರ್ಥರ ಆಗಮನಕ್ಕೆ ವಿಪ್ರರು ಸಾಂಪ್ರದಾಯಿಕ ಉಡುಪಿನಲ್ಲಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಮಠದ ಅರ್ಚಕ ಗುರುರಾಜಾ ಆಚಾರ್ಯ, ಸಮಾಜದ ಅಧ್ಯಕ್ಷ ಗಿರಿಶ್ ಜಾನಿಬ್, ಕಾರ್ಯದರ್ಶಿ ಅನಂತನಾಗ ದೇಶಪಾಂಡೆ ಸೇರಿದಂತೆ ವಿಪ್ರ ಸಮಾಜದ ಅನೇಕ ಮುಖಂಡರು ಮತ್ತು ಮಹಿಳೆಯರು ಇದ್ದರು.














