1:08 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಅನನ್ಯ ಸಮಾಜ ಸೇವೆ: ಅಂತರಗಂಗೆ ಲಲಿತಾ ವಿರೂಪಾಕ್ಷಯ್ಯ ಸ್ವಾಮಿ ದಂಪತಿಗೆ ಚಂದರಗಿ ಚೆಂದ ರಾಜ್ಯ ಪ್ರಶಸ್ತಿ

09/07/2024, 19:28

ರಾಯಚೂರು(reporterkarnataka.com):ಮಸ್ಕಿ ತಾಲೂಕಿನ ಅಂತರಂಗಿ ಗ್ರಾಮದ ಲಲಿತಾ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ದಂಪತಿಗೆ 2024ರ ಚಂದರಗಿಯ ಚಂದ ದಂಪತಿ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ.
ತಪಭೂಷಣ ತಪ್ಪು ರತ್ನ ಶ್ರೀ ಪೂಜ್ಯ ವೀರಭದ್ರ ಮಹಾ ಶಿವಾಚಾರ್ಯ ದೇವರು ಎಂ ಚಂದರಗಿ ಕಟಕೋಳ್ ಈ ವಿಷಯ ತಿಳಿಸಿದರು.

ಗುರುಪೂರ್ಣಿಮೆಯ ಕಾರ್ಯಕ್ರಮದಲ್ಲಿ ಗುರು ಶಿಷ್ಯರ ಬಾಂಧವ್ಯ ಸಮ್ಮಿಲನ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ನಾಡಿನ ಮಠಾಧೀಶರಾದ ಡಾ. ಶ್ರೀ ಶಿವಲಿಂಗ ಶಿವಾಚಾರ್ಯ ದೇವರು ಹಾಗೂ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೆ ರಂಗಕ್ಕೆ ತನ್ನದೇ ಆದ ಇತಿಹಾಸವಿದ್ದು. ಅಂತಹ ನಿಟ್ಟಿನಲ್ಲಿ ಮಾಧ್ಯಮ ರಂಗದಲ್ಲಿ ಹೆಸರು ಮಾಡಿರುವ ಲಲಿತಾ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ದೊರಕಿದೆ.
ಇದು ದಂಪತಿಗೆ ದೊರಕುವ ಎರಡನೆಯ ರಾಜ್ಯ ಪ್ರಶಸ್ತಿಯಾಗಿದೆ.
….

ಈ ಪ್ರಶಸ್ತಿಗೆ ಮಾತೆ ಮಂಜಮ್ಮ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ರುದ್ರಮುನಿ ಶಿವಾಚಾರ್ಯ ದೇವರು ಮಸ್ಕಿ, ಬಂಗ್ಲೆ ಮಲ್ಲಿಕಾರ್ಜುನ, ಅವನಿಕ ಎಸ್. ನಾಗರತ್ನ, ಸುಕನ್ಯ, ಶಿಕಾರಿಪುರದ ವೀಣಾ ಹಿರೇಮಠ, ಸೌಮ್ಯಶ್ರೀ ಹಿರೇಮಠ, ಡಾ. ಶ್ರೀದೇವಿ ಲಕ್ಕುಂಡಿ, ಅನಿತಾ ಮಂತ್ರಿ, ಕರಿಬಸಯ್ಯಸ್ವಾಮಿ ಸಿಂಧನೂರ್ ಮಠವಹಾಗೂ ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ .ಹಾಗೆ ಅನೇಕರು ಈ ಪ್ರಶಸ್ತಿಗೆ ಶುಭ ಹಾರೈಸಿದ್ದಾರೆ.
ಇದೇ ತಿಂಗಳು 20ನೇ ತಾರೀಕಿಗೆ ರಾಮದುರ್ಗ ತಾಲೂಕಿನ ಸುಕ್ಷೇತ್ರ ಎಂ ಚಂದಮಠದಲ್ಲಿ ಪ್ರತಿಭಾ ಪುರಸ್ಕಾರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗುವುದು .ಶ್ರೀಗಳ ಆಶೀರ್ವಾದದಿಂದ ಹಾಗೂ ಆತ್ಮೀಯ ಸ್ನೇಹಿತ ಮಹಾಂತೇಶ್ ಪಟ್ಟಣಶೆಟ್ಟಿ ರತ್ನಮ್ಮ ಪಟ್ಟಣಶೆಟ್ಟಿ .ಅವರಿಗೂ ಸಹ ಚಂದರಗಿ ಚೆಂದ ಪ್ರಶಸ್ತಿ ಲಭಿಸಿದ್ದು .ಅವರಿಗೂ ಕೂಡ ಪ್ರತಿಭಾ ಪುರಸ್ಕಾರ ಶ್ರೀಗಳಾ ಆಶೀರ್ವಾದವಿದ್ದು.
ಈ ಕಾರ್ಯಕ್ರಮಕ್ಕೆ ಶ್ರೀ ಮಠದ ಶಿಷ್ಯಂದಿರು ಹಾಗೂ ಕಡಕೋಳ ಸಂಸ್ಥಾನ ಹಿರೇಮಠದ ಶಿಷ್ಯಂದಿರು .ಬಾಘೂಜಿ ಕೊಪ್ಪದ ಶಿಷ್ಯಂದರು ಮತ್ತು ಶ್ರೀಗಳು. ದಿದ್ದಿಗಿ ಅಂತರಗಂಗೆ ಗ್ರಾಮದ ಸರ್ವ ಸದ್ಭಕ್ತರು. ಶ್ರೀಗಳ ಕೃಪೆಗೆ ಪಾತ್ರರಾಗಿ ಪುನೀತರಾಗಬೇಕೆಂದು ಶ್ರೀಗಳ ಶಿಷ್ಯಂದಿರಾದ . ನಡೆಹಳ್ಳಿ . ಶಿಕ್ಷಕರು ಸರ್ ತಿಳಿಸಿದರು. ಈ ಕಾರ್ಯಕ್ರಮಕ್ಕೆ ತನು ಮನ ಧನದಿಂದ ಶ್ರೀಗಳ ಕಾರ್ಯಕ್ರಮಕ್ಕೆ ನೀವು ಬನ್ನಿ ಬರವರನ್ನು ಕರೆತನ್ನಿ ಗುರು ಶಿಷ್ಯರ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಗುರುಗಳ ಕೃಪೆಗೆ ಪಾತ್ರರಾಗಿ ರಾಜ್ಯ ಪ್ರಶಸ್ತಿ ದೊರಕಿರುವ ಚಂದರಗಿ ಚೆಂದ ಪ್ರಶಸ್ತಿಗೆ . ಆಯ್ಕೆಯಾಗಿರುವ ಶ್ರೀಮತಿ ಲಲಿತಾ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಇವರನ್ನು ಅಭಿನಂದಿಸಿ ಶ್ರೀಗಳ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಿ ಎಂದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು