ಇತ್ತೀಚಿನ ಸುದ್ದಿ
ಮಾಗುಂಡಿ-ಬಾಳೆಹೊನ್ನೂರು ರಸ್ತೆಗೆ ಉರುಳಿದ ಬೃಹತ್ ಮರ: ಟ್ರಾಫಿಕ್ ಜಾಮ್; ಸಂಚಾರ ಅಸ್ತವ್ಯಸ್ತ
06/07/2024, 12:25
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ಎನ್.ಆರ್.ಪುರ ತಾಲೂಕಿನ
ಮಾಗುಂಡಿ-ಬಾಳೆಹೊನ್ನೂರು ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಎನ್.ಆರ್.ಪುರ ತಾಲೂಕಿನಿಂದ ಕಳಸ ತಾಲೂಕಿಗೆ ಸಂಪರ್ಕ ಕಲ್ಪಿಸುವ ಮಾಗುಂಡಿ ರಸ್ತೆ ಇದಾಗಿದೆ. ಮರ ಬಿದ್ದ ಪರಿಣಾಮ ಬೆಳ್ಳಂಬೆಳಗ್ಗೆಯೇ ಬಾಳೆಹೊನ್ನೂರು-ಕಳಸ ರಸ್ತೆ ಬಂದ್ ಆಗಿದೆ. ಕಳಸ-ಹೊರನಾಡಿಗೆ ಹೋಗಿ-ಬರುವ ಮಾರ್ಗವೂ ಬಂದ್ ಆಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.ಕೂಡಲೇ ಕಾರ್ಯಪ್ರವೃತರಾದ ಸ್ಥಳಿಯರು ಮರ ತೆರವುಗೊಳಿಸಿದರು.














