9:26 PM Sunday6 - October 2024
ಬ್ರೇಕಿಂಗ್ ನ್ಯೂಸ್
ರಡ್ಡೇರಹಟ್ಟಿಯಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್: 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ ಮಾಜಿ ಶಾಸಕರ ಸಹೋದರ ದಿಢೀರ್ ನಾಪತ್ತೆ; ಕೂಳೂರು ಸೇತುವೆಯಲ್ಲಿ ಕಾರು ಪತ್ತೆ; ಆತ್ಮಹತ್ಯೆ… ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ…

ಇತ್ತೀಚಿನ ಸುದ್ದಿ

ಒತ್ತುವರಿ ತೆರವು ಮಾಡಿದ ಜಮೀನುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡಿ: ಸಾಮಾಜಿಕ ಕಾರ್ಯಕರ್ತ ಉಮೇಶ ಕೆ. ಮುದ್ನಾಳ ಒತ್ತಾಯ

05/07/2024, 21:28

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmal.com

ಯಾದಗಿರಿ ಜಿಲ್ಲೆಯ ವಡಗೇರಿ ತಾಲ್ಲೂಕಿನ ಸುಗೂರು ಮತ್ತು ಗೋಡಿಹಾಳ ಗ್ರಾಮಗಳಲ್ಲಿ ಅರಣ್ಯ ಮತ್ತು ಗೈರಾಣಿಗೆ ಸೇರಿದ ಸುಮಾರು 95 ಎಕರೆ ಜಮೀನು ಅತಿಕ್ರಮ ಒತ್ತುವರಿ ತೆರವು ಮಾಡಿದ ಜಾಗೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಒತ್ತುವರಿಯಿಂದ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಒತ್ತಾಯಿಸಿದ್ದಾರೆ.


ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾಧಿಕಾರಿಗಳು ವಡಗೇರಿ ತಾಲ್ಲೂಕಿನ ಅಗ್ನಿಹಾಳ ಗ್ರಾಮದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಒತ್ತುವರಿ ತೆರವು ಮಾಡಿ ಆ ಸ್ಥಳದಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡಿದರು. ಆದರೆ ಇದೇ ಮಾದರಿಯಲ್ಲಿ ಹೋರಾಟದ ಮೂಲಕ ಒತ್ತುವರಿ ಜಾಗೆ ತೆರವು ಮಾಡಿಸಿದ ಸುಗೂರದಲ್ಲಿ 47 ಎಕರೆ, ಗೋಡಿಹಾಳದಲ್ಲಿ 48 ಎಕರೆ ಸೇರಿ ಒಟ್ಟು 95 ಎಕರೆ ಜಾಗೆಯಲ್ಲಿಯೂ ವಿವಿಧ ತಳಿಯ ಸಸಿ ನೆಡುವ ಕಾರ್ಯಕ್ರಮ ಮಾಡುವಂತೆ ಒತ್ತಾಯಿಸಿದ್ದಾರೆ.
ಇದರಿಂದ ಒತ್ತುವರಿ ತೆರವು ಮಾಡಿದ ಜಮೀನು ರಕ್ಷಣೆಯೂ ಆಗುತ್ತದೆ ಬಿಸಿಲಿನ ತಾಪಕ್ಕೆ ಈಡಾಗಿರುವ ಈ ಪ್ರದೇಶದಲ್ಲಿ ಅರಣ್ಯ ಬೆಳೆಸಿದಂತೆಯೂ ಆಗುತ್ತದೆ. ಇದಕ್ಕೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಬೇಕೆಂದು ಅವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಮಳೆಗಾಲ ಆರಂಭವಾಗಿರುವುದರಿಂದ ಇಗಲೇ ಕಾರ್ಯಕ್ರಮ ಮಾಡುವುದು ಸೂಕ್ತವಾಗಿದೆ. ಕೂಡಲೇ ಕಾರ್ಯಪ್ರವೃತ್ತರಾಗಿ ಒತ್ತುವರಿ ಜಾಗೆಯಲ್ಲಿ ಪರಿಸರ ರಕ್ಷಣೆ ಕಾರ್ಯಕ್ರಮ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಹಿಂದೆ ನಮ್ಮ ಹೋರಾಟಕ್ಕೆ ಎಚ್ಚೆತ್ತು ಪೊಲೀಸ್ ಬಂದೋಬಸ್ತ್ ನಲ್ಲಿ ಅರಣ್ಯ ಇಲಾಖೆಯವರ ಸಮ್ಮುಖದಲ್ಲಿಯೇ ಎರಡು ಗ್ರಾಮಗಳಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಿದ್ದು ಇಂತಹ ಜಾಗೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡುವುದರಿಂದ ಒತ್ತುವರಿ ಆಗದಂತೆ ನೋಡಿಕೊಳ್ಳಲು ಮತ್ತು ಅರಣ್ಯ ಬೆಳೆಸಿದಂತೆ ಆಗುತ್ತದೆ ಎಂದು ಅವರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.


ಈ ಹಿಂದೆ ಒತ್ತುವರಿ ತೆರವು ಮಾಡಿ ನಾಮಫಲಕ ಅಳವಡಿಸಿದ್ದರೂ ಅವುಗಳನ್ನು ಬೀಳಿಸಿ ಮತ್ತೆ ಅತಿಕ್ರಮಣ ಮಾಡುವ ಕೆಲಸಗಳು ನಡೆಯುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕಿದೆ.

-ಉಮೇಶ ಕೆ. ಮುದ್ನಾಳ,
ಸಾಮಾಜಿಕ ಹೋರಾಟಗಾರು
ಯಾದಗಿರಿ

ಇತ್ತೀಚಿನ ಸುದ್ದಿ

ಜಾಹೀರಾತು