ಇತ್ತೀಚಿನ ಸುದ್ದಿ
ಮಸ್ಕಿ: ಸತ್ಸಂಗ, ಭಜನೆ, ವಿಶೇಷ ಪೂಜೆ, ಸಾಮೂಹಿಕ ಜನಿವಾರ ಧಾರಣೆ
22/08/2021, 15:19
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿಯ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಅಭಿಷೇಕ, ಹೋಮ ಮತ್ತು ಸಾಮೂಹಿಕ ಜನಿವಾರ ಧಾರಣೆಯು ರಾಘವೇಂದ್ರ ಆಚಾರ್ಯ ಅವರ ಸಮ್ಮುಖದಲ್ಲಿ ನಡೆಯಿತು.
ಬೆಳಗ್ಗೆ10 ಗಂಟೆಗೆ ಪಲ್ಲಕ್ಕಿ ಉತ್ಸವವು ಕೊರೊನಾ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ದೇವಸ್ಥಾನದ ಗರುಢಗಂಬವನ್ನು 5 ಬಾರಿ ಸುತ್ತುವರಿದು ಆಚರಿಸಲಾಯಿತು. ಮಸ್ಕಿಯ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಅಭಿಷೇಕ ಮತ್ತು 8ಕ್ಕೆ ಹೋಮ, ಸಾಮೂಹಿಕ ಜನಿವಾರ ಧಾರಣೆಯು ರಾಘವೇಂದ್ರ ಆಚಾರ್ಯ ಅವರ ಸಮ್ಮುದಲ್ಲಿ ನಡೆಯಿತು.
ಈ ಬಾರಿ ಶರಣಪ್ಪ ಕಮ್ಮಾರ ರಾಜ್ಯ ಸತ್ಸಂಗದ ಭಜನಾ ಪ್ರಮುಖ ಹನುಮಸಾಗರ ಅವರು ಸಮಾಜದ ಮಹಿಳೆಯರಿಗೆ ಹಾಗೂ ಸುತ್ತಮುತ್ತಲಿನ ಆಸಕ್ತರಿಗೆ ಮಾರ್ಕಂಡೇಶ್ವರದಲ್ಲಿ ಭಜನೆಯನ್ನು ಹಮ್ಮಿಕೊಂಡಿದ್ದು, ದಿನಾಲು ಕಲಿಕೆ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾಗರಾಜ ಕರ್ಲಿ, ಮಲ್ಲಯ್ಯ ಪಗಡೇಕಲ್, ಯಮನಪ್ಪ ದೇವರಡ್ಡಿ, ರಾಘವೇಂದ್ರ ಚಿನ್ನಿ, ವೀರೇಶ ಪೂಜಾರಿ, ಡಾ. ಶಂಕರ್ ಕರ್ಲಿ ಹಾಗೂ ಯುವಕರು, ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.