ಇತ್ತೀಚಿನ ಸುದ್ದಿ
ಹುಣಸಗಿ: ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ; ಸತ್ಸಂಗ ಸಂಜೀವಿನಿ ಕೂಟ
03/07/2024, 14:05
ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೆನಕನಹಳ್ಳಿ ಮಹಾಬೋಧಾಲಯ ಮಠದಲ್ಲಿ ಇಂದು ಶ್ರೀ ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಸತ್ಸಂಗ ಸಂಜೀವಿನಿ ಕೂಟ ಏರ್ಪಡಿಸಲಾಗಿತ್ತು.
ಈ ಸತ್ಸಂಗ ಸಂಜೀವಿನಿ ಕೂಟ ಮೂರು ದಿನಗಳ ಕಾಲ ನಡೆಯಲಿದ್ದು, ಬೆನಕನಹಳ್ಳಿ ಮಠಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶರಣರ ಹಿತ ವಚನಗಳನ್ನು ಆಲಿಸುತ್ತಾರೆ.
ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸುತ್ತಿರುವ ಭಕ್ತಾದಿಗಳಿಗೆ ಪ್ರವಚನ ನೀಡಲು ಅನೇಕ ಮಠಾಧಿಪತಿಗಳು ಗುರುಗಳು ಆಗಮಿಸುತ್ತಾರೆ. ಕಾರ್ಯಕ್ರಮಕ್ಕೆ ಮಾತೊ ಶ್ರೀ ದೇವಿತಾಯಿ, ಮನೋಹರ ರಾವ್ ಕುಲಕರ್ಣಿ, ಕೃಷ್ಣಾನಂದ ಶಾಸ್ತ್ರಿ, ಶಂಕ್ರಣ್ಣ ಹುಣಶ್ಯಾಳ ಹಾಗೂ ಪರಮಪೂಜ ಈ ದೇವಾನಂದ ಶರಣರು ಮಹಾಭೋದಾಲಯ ಬೆನಕನಹಳ್ಳಿ ಮೂರು ದಿನಗಳ ವರೆಗೂ ನಡೆಯುವ ಈ ಸಂಜೀವಿನಿ ಕೂಟವು ಪ್ರತಿದಿನವೂ ಒಬ್ಬರು ಶರಣರು ಭಕ್ತಾದಿಗಳಿಗೆ ಪ್ರವಚನ ಮಾಡುತ್ತಿದ್ದಾರೆ. ಇಂದು ಮೂರನೇ ದಿನವಾದ್ದರಿಂದ ಬಹಳ ವಿಶೇಷ ಪೂಜೆ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪರಮಪೂಜ್ಯರ ಪ್ರವಚನವನ್ನು ಆಲಿಸುತ ಭಕ್ತಾದಿಗಳು ಮೈಮರೆಯುವಂತೆ ಕುಳಿತಿದ್ದರು. ಈ ಮಠದಲ್ಲಿ ದಿನನಿತ್ಯ ವಿವಿಧ ಬಗೆಯ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತಿತ್ತು. ಆದರೆ ಇಂದು ಕೊನೆಯ ದಿನ ಪ್ರಯುಕ್ತ ಶೇಂಗಾ ಹೋಳಿಗೆ ವಿಶೇಷವಾಗಿ ನೀಡಲಾಯಿತು. ಶ್ರೀ ಸಂಜೀವಿನಿ ಕೂಟದಲ್ಲಿ ಸಹಸ್ರಾರು ಭಕ್ತಾದಿಗಳು ಬೆನಕನಹಳ್ಳಿ ಹೆಬ್ಬಾಳ ಕ್ಕೆ ಗ್ರಾಮದ ಮುಖಂಡರು ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.