5:00 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕುಡ್ಲ ಹೋಮಿಯೊಕಾನ್-24 ರಾಷ್ಟ್ರೀಯ ಸಮಾವೇಶ ಮತ್ತು ವೈಜ್ಙಾನಿಕ ವಿಚಾರ ಸಂಕಿರಣ ಉದ್ಘಾಟನೆ

01/07/2024, 14:30

ಮಂಗಳೂರು(reporterkarnataka.com): ಐಎಚ್‌ಎಂಎ ವತಿಯಿಂದ ಆಯೋಜಿಸಿದ ‘ಕುಡ್ಲ ಹೋಮಿಯೊಕಾನ್-24’ ರಾಷ್ಟ್ರೀಯ ಸಮಾವೇಶ ಮತ್ತು ವೈಜ್ಙಾನಿಕ ವಿಚಾರ ಸಂಕಿರಣವನ್ನು ನಗರದ ಖಾಸಗಿ ಹೋಟೆಲ್‌ನಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು,ಈಗಿನ ಸಮಾಜದಲ್ಲಿ ಬೇರೆ ಬೇರೆ ರೀತಿಯ ಆಸ್ಪತ್ರೆಗಳಿಗೆ ತೆರಳಿ ಹಣವನ್ನೆಲ್ಲ ಖಾಲಿ ಮಾಡಿಕೊಂಡ ನಂತರ ಹೋಮಿಯೋಪತಿ, ಆಯುರ್ವೆಧ ಆಸ್ಪತ್ರೆಗಳಿಗೆ ಜನರು ಬರುತ್ತಾರೆ ಅದು ಬದಲಾಗಿ ಸಮಾಜದಲ್ಲಿ ಹೋಮಿಯೋಪತಿಯ ಸ್ಥಾನ ಏನು ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನುಡಿದರು.
ನಮ್ಮಲ್ಲಿ ಮೊದಲು ಯಾರೂ ಹೋಮಿಯೋಪತಿ, ಆಯುರ್ವೇದ ಚಿಕಿತ್ಸೆಗೆ ಹೋಗುತ್ತಿದ್ದರು. ಆದರೆ ಕಾಲ ಬದಲಾದಂತೆ ಹೋಮಿಯೋಪತಿ ಚಿಕಿತ್ಸೆಯ ಒಲವು ಕಡಿಮೆಯಾಗಿ ಅಲೋಪತಿ ಚಿಕಿತ್ಸೆಯತ್ತ ಒಲವು ಹೆಚ್ಚಾಗುವಂತಾಗಿದೆ. ಆದರೆ ಹೋಮಿಯೋಪತಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಹೋಮಿಯೋಪತಿಯ ಚಿಕಿತ್ಸೆಯನ್ನೇ ನೀಡಿ. ತಾವು ಹೋಮಿಯೋಪತಿ ಅಭ್ಯಾಸಿಸಿ ಆಲೋಪತಿ ಚಿಕಿತ್ಸೆಯನ್ನು ನೀಡಿದರೆ ಹೋಮಿಯೋಪತಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಹೋಮಿಯೋಪತಿ ಪ್ರೋತಾಹಕ್ಕಾಗಿ ನಾನು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆಯನ್ನು ತೆರೆದಿದ್ದು, ಈಗ ಜಿಲ್ಲಾ ಮಟ್ಟದಲ್ಲಿ ವೈದ್ಯರ ಕೊರತೆ ಇದ್ದು ಅದನ್ನು ಶೀಘ್ರವಾಗಿ ನಿವಾರಿಸುವ ಭರವಸೆಯನ್ನು ನೀಡಿದರು.
ನೀವು ಈಗ ರಾಷ್ಟ್ರ ಮಟ್ಟದ ಸಮಾವೇಶ ನಡೆಸುತ್ತಿದ್ದು, ಅದರಲ್ಲಿ ಅಜೇಂಡಾವನ್ನು ಮಂಡಿಸಿ ಅದರ ವರದಿಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿ ನಾನು ಅದನ್ನು ಮಂತ್ರಿಗಳಲ್ಲಿ ಮಾತನಾಡಿ, ಹೋಮಿಯೋಪತಿ ಚಿಕಿತ್ಸೆಗೆ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಖಾದರ್ ತಿಳಿಸಿದರು.
ಫಾದರ್ ಮುಲ್ಲರ್ ಆಸ್ಪತ್ರೆಯ ನಿಯೋಜಿತ ನಿರ್ದೇಶಕ, ಆಡಳಿತಾಧಿಕಾರಿ ಫಾ. ಫಾಸ್ಟೀನ್ ಎಲ್. ಲೋಬೋ ಮಾತನಾಡಿ, ನಾವು ಕಲಿತ ವಿದ್ಯೆಯನ್ನು ಎಷ್ಟು ಅಭ್ಯಾಸ ಮಾಡುತ್ತೇವೆ ಅಷ್ಟು ಅದರಲ್ಲಿ ಶೇಷ್ಠ ವ್ಯಕ್ತಿಯಾಗಲು ಸಾಧ್ಯ. ನಾವು ಕೇವಲ ಪಠ್ಯವನ್ನು ಓದಿರುತ್ತೇವೆ ಅದನ್ನು ನಾವು ಪ್ರಾಯೋಗಿಕವಾಗಿ ಅಭ್ಯಾಸಿಸಿದಾಗ ಉತ್ತಮ ವೈದ್ಯನಾಗಲು ಸಾಧ್ಯ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾವು ಕಲಿತದ್ದನ್ನು ಮೊದಲು ಅಭ್ಯಾಸಿಸಬೇಕು. ಅದರೊಂದಿಗೆ ನಾವು ನಡೆಸುವಂತಹ ಇಂತಹ ಸಮಾವೇಶಗಳು ಒಂದು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯ ಮುಂದುವರೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಐಎಚ್‌ಎಂಎಯ ರಾಷ್ಟ್ರೀಯ ಅಧ್ಯಕ್ಷ ಡಾ. ಉವೈಸೆ ಕೆ.ಎಂ. ವಹಿಸಿ ಮಾತನಾಡಿದರು.
ರಾಜ್ಯದ ಆಯುಷ್ ಇಲಾಖೆಯ ಉಪ ನಿರ್ದೇಶಕ ಡಾ. ಅಶ್ವಥ್ ನಾರಾಯಣ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಲ್, ಐಎಚ್‌ಎಂಎಯ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಡಾ. ಧೀರಾಜ್ ಸ್ಯಾಮ್ಯುಯೆಲ್, ರಾಜ್ಯ ಐಎಚ್‌ಎಂಎಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಮ್ಮೇಳನದ ನಿರ್ದೇಶಕ ಡಾ. ಪ್ರವೀಣ್ ಕುಮಾರ್ ರೈ, ಐಎಚ್‌ಎಂಎಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಮ್ಮೇಳನದ ಸಂಚಾಲಕ ಡಾ. ಅವಿನಾಶ್ ವಿ.ಎಸ್. ಉಪಸ್ಥಿತರಿದ್ದರು.
ರಾಜ್ಯ ಐಎಚ್‌ಎಂಎಯ ಅಧ್ಯಕ್ಷ ಹಾಗೂ ಸಮ್ಮೇಳನದ ಅಧ್ಯಕ್ಷ ಡಾ. ಪ್ರವೀಣ್ ರಾಜ್ ಆಳ್ವ ಸ್ವಾಗತಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು