ಇತ್ತೀಚಿನ ಸುದ್ದಿ
ಮದನಿ ನಗರದ ದುರಂತ: ಸಂತ್ರಸ್ತ ಕುಟುಂಬಕ್ಕೆ ಸ್ಪೀಕರ್ ಖಾದರ್ ಪರಿಹಾರ ಚೆಕ್ ಹಸ್ತಾಂತರ
30/06/2024, 18:25
ಮಂಗಳೂರು(reporterkarnataka.com): ಉಳ್ಳಾಲ ಸಮೀಪದ ಮದನಿ ನಗರದಲ್ಲಿ ಇತ್ತೀಚೆಗೆ ನಡೆದ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಧನವನ್ನು ಚೆಕ್ ಅನ್ನು ಸ್ಪೀಕರ್ ಯು. ಟಿ. ಖಾದರ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್. ಗಾಳಿ ನೀರು, ಬೆಂಕಿಯಿಂದ ಯಾವಾಗ ಅವಘಡ ಆಗುತ್ತದೆ ಎಂಬುದು ನಮಗೆ ಗೊತಿಲ್ಲ. ಅದು ದೇವರ ಕೈಯಲ್ಲಿರುವುದು. ಅದರಿಂದ ಜಾಗರೂಕತೆಯಿಂದ ನಾವೆಲ್ಲರೂ ಇರಬೇಕು. ಆ ಕುಟುಂಬ ದುಃಖದಲ್ಲಿ ಇಡೀ ನಮ್ಮ ಊರೇ ಜಾತಿ -ಧರ್ಮ ಬಿಟ್ಟು ಜೊತೆ ನಿಂತಿದೆ. ಅದಕ್ಕೆ ನಾನು ಅಭಿನಂದಿಸುತ್ತೇನೆ. ಸರಕಾರದ ವತಿಯಿಂದ ಏನು ಪರಿಹಾರ ದೊರೆಯಬೇಕು ಅದನ್ನು ನಾನು ತೆಗೆಸಿ ಕೊಟ್ಟಿದ್ದೇನೆ. ಅವರಿಗೆ ಎಷ್ಟ ಪರಿಹಾರ ಸರಕಾರ ಕೊಟ್ಟರೂ ಅವರ ದುಃಖಕ್ಕೆ ಸ್ಪಂದಿಸಲು ಸಾಧ್ಯವಿಲ್ಲ. ಅವರ ಸಹಾಯಕ್ಕೆ ನಾವು ನಿಲ್ಲಬೇಕು ಎಂದು ಅವರು ಹೇಳಿದರು.