1:30 PM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ ಜಯ ಎಂದ ಉಮೇಶ ಕೆ. ಮುದ್ನಾಳ

29/06/2024, 21:09

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಕಳೆದ ಎರಡು ವರ್ಷಗಳ ಧಾರಾಕಾರ ಸುರಿದ ಮಳೆಗೆ ಇನ್ನಷ್ಟು ಕೊಚ್ಚಿಕೊಂಡು ಹೋದ ಸೇತುವೆ ನಿರ್ಮಾಣಕ್ಕೆ ಭತ್ತ ನಾಟಿ ಮಾಡುವ ಮುಖಾಂತರ ವಿನೂತನ ಪ್ರತಿಭಟನೆ ನಡೆಸಿದ್ದಕ್ಕೆ ಇದೀಗ 1ಕೋಟಿ 80 ಲಕ್ಷ ರೂ. ಗಳ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ ಎಂದು ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.


ಈ ಕುರಿತು ಸ್ಥಳಕ್ಕೆ ಭೇಟ ನೀಡಿ ಸೇತುವೆ ನಿರ್ಮಾಣವಾಗಿದ್ದನ್ನು ಮನಗಂಡ ನಂತರ ಹೇಳಿಕೆ ನೀಡಿದ ಅವರು, ಕಳೆದ ವರ್ಷ ಮಹಿಳೆಯರು ಹಾಗೂ ರೈತರು ಸೇರಿಕೊಂಡು ಬತ್ತದ ನಾಟಿಯನ್ನು ಹಾಡು ಹಾಡುವ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಇದಾದ ನಂತರ ಸೇತುವೆ ಹಾಗೂ ರಸ್ತೆ ಸುಮಾರು 1.80 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಈ ಸೇತುವೆಯಿಂದ ಕೇವಲ ಮುಂಡರಗಿ-ಬೆಳಗೇರಿ ಅಲ್ಲದೇ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಬಸ್ ಸಂಚಾರ ಬಂದಾಗಿತ್ತು. ಈದೀಗ ಬಸ್ ಸಂಚಾರವೂ ಆರಂಭವಾಗಲಿದೆ ಎಂದು ಅವರು ತಿಳಿಸಿದರು.


ಜೊತೆಗೆ ಸ್ಥಳದಲ್ಲಿಯೇ ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದಾಗ ಶಾಸಕರು ಸಧ್ಯ ತಾತ್ಕಾಲಿಕವಾಗಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಬಾರ್ಡ, ಕೆಕೆಆರ್‌ಡಿಬಿ ಇಲ್ಲವೇ ತಮ್ಮ ಶಾಸಕರ ಅನುದಾನದಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅದರಂತೆ ಈದೀಗ ಸೇತುವೆ ನಿರ್ಮಾಣವಾಗಿರುವುದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು. ಈದೀಗ ಶಾಸಕರು ಸಮಯ ನಿಗದಿಪಡಿಸಿ ಒಂದು ವಾರದಲ್ಲಿಯೇ ಸೇತುವೆ ಉದ್ಘಾಟನೆ ನೆರವೇರಿಸುವಂತೆ ಒತ್ತಾಯ ಮಾಡುವುದಾಗಿ ತಿಳಿಸಿದ್ದಾರೆ.
ಈ ವೇಳೆ ಬೆಳಗೇರಾ ಗ್ರಾಮಸ್ಥರಾದ ಆಂಜಿನೇಯ ನಾಯ್ಕೋಡಿ, ರಫೀಕ್ ಪಟೇಲ್, ಬಾಬುಖಾನ್, ಈರಪ್ಪ, ನಿಂಗಪ್ಪ ಮೋನಪ್ಪ ಸೇರಿ ಅನೇಕರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು