ಇತ್ತೀಚಿನ ಸುದ್ದಿ
ಹುಣಸಗಿ ಪಟ್ಟಣದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ
28/06/2024, 18:04
ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gma.com
ಹುಣಸಗಿ ಪಟ್ಟಣದ ತಾಲೂಕು ಆಡಳಿತ ಕಚೇರಿ, ಬಾಲಕರ ಪ್ರೌಢಶಾಲೆ, ಪೋಲಿಸ್ ಠಾಣೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ತಾಲೂಕು ಪಂಚಾಯತ ಕಾರ್ಯಾಲಯ, ಪಟ್ಟಣ ಪಂಚಾಯತ್ ಕಾರ್ಯಾಲಯ ಹಾಗೂ ಖಾಸಗಿ ಶಾಲೆಗಳಲ್ಲಿ ಬೆಂದಕಾಳೂರಿನ ನಾಡಪ್ರಭು ಕೆಂಪೇಗೌಡ ಅವರ 515ನೇ ಜಯಂತಿ ಆಚರಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ, ಸುರಪುರ ನ್ಯಾಯಾಧೀಶರಾದ ಮಾರುತಿ ಕೆ., ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಸ್ವಾಮಿ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಆರ್.ವಿ ನಾಯಕ ಹಾಗೂ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳಾದ ವೆಂಕಟೇಶ, ಅರವಿಂದ, ಶ್ರೀಶೈಲ, ಆರ್.ಬಿ. ಹಿರೇಮಠ, ಬಸವರಾಜ ಕುಪ್ಪಿ, ಸುಲೋಚನಾ, ಕವಿತಾ ಹಾಗೂ ಆಯಾ ತಾಲೂಕು ಕಚೇರಿಯ ಸಿಬ್ಬಂದಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮಾಜದ ಮುಖಂಡರುಗಳಾದ ರುದ್ರಗೌಡ ಮೇಟಿ, ಸಿದ್ದನಗೌಡ ಪೋಲಿಸ್ ಪಾಟೀಲ್, ಶಾಂತಗೌಡ ಹೆಬ್ಬಾಳ, ಶಿವಪುತ್ರ ಗುಂಡಲಗೇರಾ, ಅಮರೇಶ ಬಿರಾದಾರ, ಬಾಪುಗೌಡ ಮೇಟಿ, ಅಮರೇಶ ಇದ್ದರು.