ಇತ್ತೀಚಿನ ಸುದ್ದಿ
ಪುತ್ತೂರು: ಮನೆ ಮೇಲೆ ತಡೆಗೋಡೆ ಕುಸಿತ; ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ರಕ್ಷಿಸಿದ ತಂದೆ
27/06/2024, 12:24
ಪುತ್ತೂರು(reporterkarnataka.com): ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಕಾರಣ ಪುತ್ತೂರಿನಲ್ಲಿ ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದು, ಅದೃಷ್ಟವಶಾತ್ ಮಕ್ಕಳನ್ನು ರಕ್ಷಿಸಲಾಗಿದೆ. ಉಳ್ಳಾಲ ಸಮೀಪದ ಮದನಿನಗರದಲ್ಲಿ ದುರಂತ ನಡೆದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಪುತ್ತೂರು ಸಮೀಪದ ಬನ್ನೂರು ಬಳಿಯ ಜೈನರಗುರಿ ಎಂಬಲ್ಲಿನ ಮಜೀದ್ ಎಂಬವರ ಮನೆಯ ಮೇಲೆ ಗುರುವಾರ ಮುಂಜಾನೆ ಗೋಡೆ ಕುಸಿದು ಬಿದ್ದಿದೆ.
ತಡೆಗೋಡೆ ಬಿದ್ದ ಪರಿಣಾಮ ಮನೆಯ ಅರ್ಧಭಾಗ ಕುಸಿದು ಮಜೀದ್ ಹಾಗೂ ಇಬ್ಬರು ಮಲಗಿದ್ದ ಕೊಠಡಿ ಮೇಲೆಯೇ ಬಿದ್ದಿದೆ. ತಕ್ಷಣ ಎಚ್ಚೆತ್ತ ಮಜೀದ್ ಅವರು ಮಣ್ಣಿನಡಿ ಸಿಲುಕಿದ್ದ ಮಕ್ಕಳಿಬ್ಬರನ್ನು ಪಾರು ಮಾಡಿದ್ದಾರೆ. ತಡೆಗೋಡೆ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುತ್ತಾರು ಮದನಿನಗರದಲ್ಲಿ ನಿನ್ನೆ ಕಂಪೌಂಡ್ ಕುಸಿದು ಮನೆಯ ಮೇಲೆಯೇ ಬಿದ್ದು ನಾಲ್ವರು ಮೃತಪಟ್ಟ ಘಟನೆಯ ನೆನಪು ಮರೆಯುವ ಮುನ್ನವೇ