11:49 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಯಕ್ಷಗಾನ ಕಲಿಕೆಯಿಂದ ಮನೋಬಲ ವೃದ್ದಿ: ಯಕ್ಷ ಕಲಾವಿದ ಉಲ್ಲಾಸ್ ಆರ್. ಶೆಟ್ಟಿ

26/06/2024, 17:12

ಸುರತ್ಕಲ್(reporterkarnataka.com): ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಯಕ್ಷಗಾನದಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳ ಮನೋಬಲ ವೃದ್ದಿಯಾಗುತ್ತದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಪೆರ್ಮುದೆ ಶಾರದ ಯಕ್ಷಗಾನ ಮಂಡಳಿಯ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ಹೇಳಿದರು.
ಡೆಲ್ಲಿ ಪಬ್ಲಿಕ್ ಸ್ಕೂಲ್, ಎಂ ಆರ್ ಪಿ ಎಲ್ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ( ರಿ) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ ಯಕ್ಷ ಶಿಕ್ಷಣ ಉಚಿತ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುತ್ತಾ ಬಂದಿರುವ ಪಟ್ಲ ಪೌಂಡೇಶನ್ ಎಲ್ಲೆಡೆ ಮನೆ ಮಾತಾಗಿದೆ ಇದು ದೇಶ ವಿದೇಶಗಳಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದು ಒಂದು ಉತ್ತಮ ಸಂಘಟನೆಯಾಗಿದೆ. ಈ ಟ್ರಸ್ಟ್‌ ನ ಸಮಾಜಮುಖಿ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಮಾತನಾಡಿ ದಾನಿಗಳ ನೆರವಿನಿಂದ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಇಷ್ಟರವರೆಗೆ ಅಶಕ್ತ ಕಲಾವಿದರಿಗೆ ಸಹಾಯ ಹಸ್ತ ಮನೆ ನಿರ್ಮಾಣ ಇಂತಹ ಸಮಾಜ ಮುಖಿ ಕೆಲಸಗಳಿಗೆ ಸುಮಾರು 12 ಕೋಟಿವರೆಗೆ ಸಹಾಯಧನ ನೀಡಿದ್ದು ಪ್ರಸಕ್ತ ಟ್ರಸ್ಟ್ ವತಿಯಿಂದ 80 ಶಾಲೆಗಳಲ್ಲಿ ಸುಮಾರು10000 ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ಶಿಕ್ಷಣ ತರಬೇತಿ ಯನ್ನು ನೀಡಲಾಗಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಅತಿಥಿಗಳಲ್ಲಿ ಒಬ್ಬರಾದ ಹರಿಕೃಷ್ಣ ಭಟ್, ಅಸಿಸ್ಟೆಂಟ್ ಮ್ಯಾನೇಜರ್ ಆಪರೇಶನ್ಸ್ ಎಂ ಆರ್ ಪಿ ಎಲ್ ಇವರು ಮಾತನಾಡುತ್ತಾ ರಾಮಾಯಣ ಮಹಾಭಾರತದಂತಹ ಪುರಾಣಗಳಲ್ಲಿನ ಧಾರ್ಮಿಕ ವಿಷಯಗಳನ್ನು ಅರಿಯುವ ಮುಖಾಂತರ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜ್ಞಾನದೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು. ಡೆಲ್ಲಿ ಪಬ್ಲಿಕ್ ಸ್ಕೂಲ್ ಇದರ ಉಪ ಪ್ರಾಂಶುಪಾಲೆ ಶ್ರೀಮತಿ ಕೃಪಾ ಸಂಜೀವ್ ಇವರು ಮಾತನಾಡುತ್ತಾ ನಮ್ಮ ಶಾಲೆಯು ಸಾಂಸ್ಕೃತಿಕವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ.. ಯಕ್ಷ ಶಿಕ್ಷಣ ಮುಖಾಂತರ ಮಕ್ಕಳಿಗೆ ಉಚಿತವಾಗಿ ಯಕ್ಷಗಾನ ತರಬೇತಿ ನೀಡುವ ಯಕ್ಷ ಪಟ್ಲ ಫೌಂಡೇಶನ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಯಕ್ಷ ಶಿಕ್ಷಕರಾದ ರಾಮಚಂದ್ರ ಮುಕ್ಕ, ಪಟ್ಲ ಪೌಂಡೇಶನ್ ಸುರತ್ಕಲ್ ಘಟಕದ ಕಾರ್ಯದರ್ಶಿ ಗಂಗಾಧರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಲ ಪೌಂಡೇಶನ್ ಸುರತ್ಕಲ್ ಘಟಕದ ಉಪಾಧ್ಯಕ್ಷ ಲೀಲಾಧರ ಶೆಟ್ಟಿ ಕಟ್ಲ ವಹಿಸಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಟ್ರಸ್ಟಿಗಳಾದ ಸವಿತಾ ಭವಾನಿ ಶಂಕರ್ ಶೆಟ್ಟಿ ಬಾಳ, ಕೇಸರಿ ಎಸ್ ಪೂಂಜ, ಸಹನಾ ರಾಜೇಶ್ ರೈ, ವೇದಾವತಿ ನಾರಾಯಣ ಶೆಟ್ಡಿ, ರವಿ ಶೆಟ್ಟಿ ಸುರತ್ಕಲ್, ಪುಷ್ಪರಾಜ ಶೆಟ್ಟಿ ಕಡುಂಬೂರು, ಸುಜಾತ ಎಲ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಬಾಳಿಕೆ ಮತ್ತು ಇತರರು ಉಪಸ್ಥಿತರಿದ್ದರು.


ಶಾಲಾ ಶಿಕ್ಷಕಿ ಶ್ರೀಮತಿ ಹಂಸಿನಿ ಇವರು ಧನ್ಯವಾದ ಸಮರ್ಪಿಸಿದರು…
ಶಾಲಾ ಶಿಕ್ಷಕರಾದ ಹೇಮನಾಥ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು