ಇತ್ತೀಚಿನ ಸುದ್ದಿ
ಮಂಗಳೂರು ನಗರ ಉತ್ತರ ಮಂಡಲದ ಕಾರ್ಯಾಲಯದಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ
23/06/2024, 21:37
ಕಾವೂರು(reporterkarnataka.com): ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರದ ಉತ್ತರ ಮಂಡಲದ ಕಾರ್ಯಾಲಯದಲ್ಲಿ ಜನಸಂಘ ಸ್ಥಾಪಕ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯನ್ನು ಬಲಿದಾನ್ ದಿವಸ್ ಆಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿಯವರ ಜೀವನ ಚರಿತ್ರೆಯನ್ನು ಹಿರಿಯರಾದ ರಾಮ ಮುಗ್ರೋಡಿಯವರು ಸವಿಸ್ತಾರವಾಗಿ ತಿಳಿಸಿದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಜಿಲ್ಲೆಯ ಉಪಾಧ್ಯಕ್ಷರಾದ ಪೂಜಾ ಪ್ರಶಾಂತ್ ಪೈ ಅವರು ತಿಳಿಸಿದರು.
ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿಯವರು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಗ್ಗೆ ಹಾಗೂ ಪಕ್ಷ ಸಂಘಟನೆ ಹಾಗೂ 23 ರಿಂದ 6ರವರೆಗೆ ನಡೆಯಲಿರುವ ಮಂಡಲದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಮಂಡಲದ ಪದಾಧಿಕಾರಿಗಳು, ಮಂಡಲದ ಜಿಲ್ಲೆಯ ಪದಾಧಿಕಾರಿಗಳು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ ಸ್ವಾಗತಿಸಿದರು. ರಣದೀಪ್ ಕಾಂಚನ್ ವಂದಿಸಿದರು.