1:27 PM Wednesday11 - February 2026
ಬ್ರೇಕಿಂಗ್ ನ್ಯೂಸ್
ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಇತ್ತೀಚಿನ ಸುದ್ದಿ

ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಬಸವೇಶ್ವರ ಜಯಂತಿ ಮಹೋತ್ಸವ: ಬೆಳ್ಳಿ ಸಾರೋಟಿನಲ್ಲಿ ಬಸವ ಪುತ್ಥಳಿಯ ಮೆರವಣಿಗೆ

12/06/2024, 22:06

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಂಜನಗೂಡು ತಾಲೂಕು ಘಟಕ ಹಾಗೂ ಸಮಸ್ತ ವೀರಶೈವ ಲಿಂಗಾಯಿತ ಬಸವ ಸೇವಾ ಒಕ್ಕೂಟಗಳ ಸಹಯೋಗದೊಂದಿಗೆ ಇಂದು ನಂಜನಗೂಡಿನಲ್ಲಿ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು
ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಆಯೋಜಿಸಿದ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆ ಮೇಲಿನ ಮಠಾಧೀಶರು ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.


ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಜಗದ್ಗುರು ಶ್ರೀ ಶಿವರಾತ್ರಿ ದೇಶೀ ಕೇಂದ್ರ ಮಹಾಸ್ವಾಮಿಗಳು ಮಾತನಾಡಿ ಇಡೀ ವಿಶ್ವದಲ್ಲೇ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಇಲ್ಲಿಯೂ ಕೂಡ ಸಮಾಜವು ಸೇರಿದಂತೆ ಮಠಮಾನ್ಯರೊಡಗೂಡಿ ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತಸ ತಂದಿದೆ. ಬಸವಾದಿ ಶರಣರನ್ನು ನೆನೆಯುತ್ತಾ, ನೆನೆಯುತ್ತ ತಮ್ಮಲ್ಲಿರುವ ಹರಿ ಷಡ್ವರ್ಗಗಳು ಹಾಗೂ ಕಾಮ, ಕ್ರೋಧ ಮದ ,ಮೋಹ ಮಾತ್ಸರ್ಯಗಳನ್ನು ಒಂದೊಂದಾಗಿ ಬಿಡುತ್ತಾ ಹೋದಾಗ ಮನುಷ್ಯನಲ್ಲಿನ ಸದ್ಭಾವನೆ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಆಶಿರ್ವಚನ ವಚನ ನೀಡಿದರು.
ಕಾಯಕರತ್ನ ಪ್ರಶಸ್ತಿ ಪುರಸ್ಕೃತರಾದ ಶರಣೆ ಜಯದೇವಿತಾಯಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಾ ಬಸವ ಜಯಂತಿ ಆಚರಣೆಯನ್ನು ದಿನನಿತ್ಯವೂ ಆಚರಿಸುವ ಮೂಲಕ ಬಸವಣ್ಣನವರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಂಡು ಅದರಂತೆ ನಡೆಯಬೇಕು ಎಂದು ಬಸವಣ್ಣನವರ ತತ್ವ ಆದರ್ಶಗಳ ಬಗ್ಗೆ ತಿಳಿಸಿದರು
ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ದೇವನೂರು ಮಹದೇವಪ್ಪ ಮಾತನಾಡಿ ಸರ್ಕಾರವು ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನಾಗಿ ಬಿಂಬಿಸಿರುವುದು ಸಂತಸ ತಂದಿದ್ದು ನಮ್ಮ ಸಮಾಜವು ಸರ್ಕಾರವನ್ನು ಅಭಿನಂದಿಸುತ್ತದೆ ಎಂದು ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಇದೇ ಸಂದರ್ಭ ವೇದಿಕೆ ಮೇಲಿನ ಹರ ಗುರು ಚರ ಮೂರ್ತಿಗಳನ್ನು ಬಳಗದ ವತಿಯಿಂದ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮಹಿಳೆಯರಾದಿಯಾಗಿ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭ ಬಂದ ಎಲ್ಲಾ ಭಕ್ತರಿಗೆ ಪ್ರಸಾದ ದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಕ್ಕೂ ಮುನ್ನ ಪಟ್ಟಣದ ಶಿವಪಾದ ಸ್ವಾಮಿಗಳವರ ಗದ್ದುಗೆಯಿಂದ ಹಲವು ಜಾನಪದ ಕಲಾ ತಂಡಗಳಿಂದ ಅದ್ದೂರಿ ಮೆರವಣಿಗೆಗೆ ಸಿದ್ದಗಂಗಾ ಶ್ರೀಗಳು ಚಾಲನೆ ನೀಡಿದರು.
ಬೆಳ್ಳಿ ಸಾರೋಟಿನಲ್ಲಿ ಬಸವ ಪುತ್ಥಳಿಯನ್ನಿರಿಸಿ ಮಂಗಳವಾದ್ಯ ವೀರಗಾಸೆ, ನಂದಿಧ್ವಜ, ಕಳಶ ಹೊತ್ತ ಮಹಿಳೆಯರು ವಿವಿಧ ಗ್ರಾಮಗಳಿಂದ ಬಂದಿದ್ದ ಬಸವೇಶ್ವರ ಹಾಗೂ ಶ್ರೀ ಮಾದೇಶ್ವರ ಪುತ್ಥಳಿ ಹಾಗು ಭಾವಚಿತ್ರಗಳು, ವಿವಿಧ ವೇಷ ಭೂಷಣಗಳು ಸೇರಿದಂತೆ ಭಜನಾ ಮಂಡಳಿಯವರು ನಡೆಸಿಕೊಟ್ಟ ಭಜನೆ, ನಂದಿ ಕಂಬ ಕುಣಿತ, , ಮತ್ತು ಮಹಿಳೆಯರು ಹೆಜ್ಜೆಹಾಕಿ ಕುಣಿದು ಕುಪ್ಪಳಿಸುವ ಮೂಲಕ ಮೆರವಣಿಗೆಗೆ ಮೆರಗು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕ್ಷೇತ್ರ ಶ್ರೀ ಮಲ್ಲನ ಮೂಲೆ ಮಠಾಧ್ಯಕ್ಷರಾದ ಶ್ರೀ ಚನ್ನಬಸವ ಸ್ವಾಮಿಗಳು ವಹಿಸಿದ್ದು ದೇವನೂರು ಶ್ರೀ ಮಹಾಂತ ಸ್ವಾಮಿಗಳು ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಶರಣ ಸಂಗಮ ಮಠದ ಶ್ರೀ ನಾಗರಾಜೇಂದ್ರ ಸ್ವಾಮಿಗಳು, ಸಮಾಜದ ಮುಖಂಡ ವಿಧ್ಯಾಲಂಕರ್ ಸೇರಿದಂತೆ ಹಲವು ಹರ ಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು