4:03 PM Monday17 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ಉದುರುತ್ತಿದೆ ಶಾಲಾ ಆವರಣ ಗೋಡೆ ಕಲ್ಲುಗಳು; ಬಿಸಿಯೂಟದ ಕೊಠಡಿಯೂ ಅಪಾಯದಲ್ಲಿ: ಸಮಸ್ಯೆಗಳ ಸುಳಿಯಲ್ಲಿ ಅಜ್ಜಿಬೆಟ್ಟು ಪ್ರಾಥಮಿಕ ಶಾಲೆ

05/06/2024, 15:52

ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್

info.reporterkarnataka@gmail.ಕಂ

ಉದುರುತ್ತಿರುವ ಕಂಪೌಂಡಿನ ಕಲ್ಲುಗಳು, ಮತ್ತೊಂದು ಕಡೆ ಬಿರುಕುಬಿಟ್ಟಿರುವ ಕಂಪೌಂಡ್ ಇನ್ನೊಂದು ಕಡೆ ಕಂಪೌಂಡಿನ ಕಲ್ಲುಗಳು ಶಾಲಾ ರಸ್ತೆಯಲ್ಲಿ ಬಿದ್ದಿವೆ. ಅಷ್ಟೇ ಅಲ್ಲದೇ ಕಂಪೌಂಡಿನ ಮುಖದ್ವಾರವೂ ಕಂಪೌಂಡಿನಿಂದ ಬೇರ್ಪಟ್ಟಿದೆ.
ಇದು ಬಂಟ್ವಾಳ ಮೂಡ ಗ್ರಾಮದ ಅಜ್ಜಿಬೆಟ್ಟು ಬಳಿಯ ಸರಕಾರಿ ಹಿರಿಯ ಶಾಲೆಯ ಕಂಪೌಂಡಿನ ದುಸ್ಥಿತಿ. ಕಳೆದ ವರ್ಷ ಶಾಲೆಯ ಆವರಣದಿಂದ ಶಾಲಾ ಕಂಪೌಂಡು ಕುಸಿದುಬಿದ್ದಿದೆ.


ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಹೃದಯಭಾಗದಲ್ಲೇ ಇರುವ ಅಜ್ಜಿಬೆಟ್ಟು ಪ್ರಾಥಮಿಕ ಶಾಲೆ ಇನ್ನೇನು 100 ವರ್ಷ ಸಮೀಪಿಸುತ್ತಿದೆ. ಸರಕಾರಿ ಶಾಲೆ ಉಳಿವಿಗಾಗಿ ಶಾಲಾಭಿವೃದ್ದಿ ಸಮಿತಿಯಿಂದ ಎಲ್‌ಕೆಜಿ, ಯುಕೆಜಿ ಆರಂಭಸಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಆದರೆ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಶೌಚಾಲಯವು ಕುಸಿದು ಬಿದ್ದಿರುವ ಶಾಲಾ ಕಂಪೌಂಡಿನ ಬಳಿಯೇ ಇರುತ್ತದೆ. ಅದರ ಬಳಿಯಲ್ಲೇ ಕೆಲವು ಕಲ್ಲುಗಳು ನೇತಾಡುವಂತಾಗಿದೆ. ಈ ಸಂದರ್ಭ ಎಲ್ಲಾ ಶಿಕ್ಷಕರು ಈ ಸಂದರ್ಭ ಅವರ ಜೊತೆಗೆ ಹೋಗಬೇಕಾದ ಸಂದರ್ಭ ಎದುರಾಗಿದೆ.
*ದುಸ್ಥಿತಿಯಲ್ಲಿ ಶಾಲಾ ಶೌಚಾಲಯ:* ಶಾಲಾ ಆವರಣದಿಂದ ಸ್ವಲ್ಪ ದೂರದಲ್ಲಿವ ಶಾಲಾ ಶೌಚಾಲಯವೂ ಸಂಪೂರ್ಣ ದುರಸ್ತಿಯಾಗಬೇಕಿದೆ. ಅಲ್ಲದೆ, ಮಳೆಗಾಲದಲ್ಲಿ ಮಕ್ಕಳು ಈ ಶೌಚಾಲಯಕ್ಕೆ ತೆರಳಲು ಪ್ರಯಾಸಪಡುತ್ತಿದ್ದು, ಶಾಲಾ ಕಟ್ಟಡದ ಸನಿಹವೇ ಕಿರಿಯ ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಶಾಲೆಯ ಬಿಸಿಯೂಟದ ಕೊಠಡಿಯ ಕೆಳಗಿನ ಭಾಗವೂ ಅಪಾಯಕಾರಿಯಾಗಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
*ಶಾಲೆಯಲ್ಲಿ ಏನೇನಿದೆ:?* ಈಗಾಗಲೇ ದಾನಿಗಳ ನೆರವಿನಿಂದ ಶಾಲೆಗೆ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದ್ದು, ಇದುವರೆಗೆ ೫ರಿಂದ ೭ನೇ ತರಗತಿವರೆಗೆ ತರಬೇತುದಾರರಿಂದ ತರಗತಿ ನಡೆಸಲಾಗಿತ್ತು. ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಗೆ ನುರಿತ ಶಿಕ್ಷಕರು ಇದ್ದಾರೆ. ಈ ವರ್ಷ ೧ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗುತ್ತದೆ. ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಕಲಿಕೆಗೆ ಸಂಬಂಧಿಸಿ ವಿಷುವಲ್ಸ್‌ಗಳನ್ನು ತೋರಿಸುವ ಮೂಲಕ ಬೋಧನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ.
ಶಾಲೆ ಮೂಲಭೂತ ಸೌಕರ್ಯಗಳಲ್ಲೊಂದಾದ ಶಾಲಾ ಕಂಪೌಂಡ್ ದುರಸ್ತಿ ಕಾಮಗಾರಿ ತುರ್ತು ಅವಶ್ಯಕತೆಯಾಗಿದ್ದು, ಯಾವುದೇ ಅವಘಡ ಆಗುವ ಮೊದಲೇ ಶಿಕ್ಷಣ ಇಲಾಖೆ ದುರಸ್ತಿಯ ಮಾಡುವ ಕೆಲಸ ಮಾಡಲಿ.
ಇನ್ನೇನು ಮಳೆಗಾಲ ಸಮೀಪಿಸುತ್ತಾ ಇದೆ. ಕಳೆದ ವರ್ಷ ಕುಸಿದು ಬಿದ್ದಿರುವ ಕಂಪೌಂಡು ಈ ವರ್ಷ ಜೋರು ಮಳೆಗೆ ಇಡೀ ಕಂಪೌಂಡು ರಸ್ತೆ ಪಾಲಾಗುವ ಸಂಭವ ಇದೆ. ಬಂಟ್ವಾಳ ಕ್ಷೇತ್ರ ಶಿಕ್ಷಣ ಇಲಾಖೆಗೆ ಕಳೆದ ವರ್ಷವೇ ಕಂಪೌಂಡು ದುಸ್ಥಿತಿಯ ಬಗ್ಗೆ ತಿಳಿಸಿದ್ದು, ಈ ವರೆಗೂ ಯಾವುದೇ ಕೆಲಸ ಆಗಲಿಲ್ಲ. ಶಾಲೆಯ ಶೌಚಾಲಯು ಕುಸಿದು ಬಿದ್ದಿರುವ ಕಂಪೌಂಡು ಬಳಿ ಇರುವುದರಿಂದ ಆದಷ್ಟು ಬೇಗ ಕಂಪೌಂಡು ಸರಿ ಮಾಡಬೇಕು ಎಂದು ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಹೇಳುತ್ತಾರೆ.
ಶಾಲಾ ಮಕ್ಕಳ ಕಲಿಕೆ ಹಾಗೂ ಇತರ ಚಟುವಟಿಕೆಗಳಿಗೆ ಪ್ರೋತ್ಸಾಹಕವಾಗಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ತರಬೇತಿಯನ್ನು ಈ ವರ್ಷ ಆರಂಭಿಸಲಿದ್ದೇವೆ. ಶಾಲಾ ಮೂಲಸೌಕರ್ಯದ ತುರ್ತು ಅಗತ್ಯಗಳಿಗೆ ಸರಕಾರ ನೆರವು ನೀಡಬೇಕಾಗಿದೆ ಎಂದು ಎಸ್ ಡಿಎಂಸಿ ಅಧ್ಯಕ್ಷರ ಹರೀಶ ಮಾಂಬಾಡಿ ನುಡಿಯುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು