ಇತ್ತೀಚಿನ ಸುದ್ದಿ
ಕರ್ನಾಟಕ ಜಲಸಾರಿಗೆ ಮಂಡಳಿಗೆ ಕರ್ನಾಟಕ ನೌಕಾ ವಲಯದ ಪ್ಲ್ಯಾಗ್ ಆಫೀಸರ್ ಕೆ.ಎಂ. ರಾಮಕೃಷ್ಣನ್ ಭೇಟಿ: ಬರಮಾಡಿಕೊಂಡ ಸಿಇಒ ಜಯರಾಮ್ ರಾಯಪುರ್
03/06/2024, 17:59

ಬೆಂಗಳೂರು(reporterkarnataka.com): ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕರ್ನಾಟಕ ಜಲಸಾರಿಗೆ ಮಂಡಳಿಗೆ ಕರ್ನಾಟಕ ನೌಕಾ ವಲಯದ ಪ್ಲ್ಯಾಗ್ ಆಫೀಸರ್ ಕೆ.ಎಂ. ರಾಮಕೃಷ್ಣನ್ ಅವರು ಭೇಟಿ ನೀಡಿದ್ದು, ಅವರನ್ನ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯಪುರ್ ಅವರು ಹೂಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ಇದೇ ವೇಳೆ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಎಂಜಿನಿಯರ್ ಪ್ರಮೀತ್, ಕಾರ್ಯಪಾಲಕ ಅಭಿಯಂತರರಾದ ಎಂ.ವಿ. ಪ್ರಸಾದ್ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿಯ ಸಿಬ್ಬಂದಿ ಇದ್ದರು.