ಇತ್ತೀಚಿನ ಸುದ್ದಿ
ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಕ್ರೈಸ್ತ ಶಿಕ್ಷಣ ವರ್ಷ ಪ್ರಾರಂಭೋತ್ಸವ: ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಕಾರ್ಯಕ್ರಮ
02/06/2024, 16:20

ಮಂಗಳೂರು(reporterkarnataka.com): ಮಂಗಳೂರು ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ಚರ್ಚ್ ಗಳಲ್ಲಿ 2024- 25ನೇ ಸಾಲಿನ ಕ್ರೈಸ್ತ ಶಿಕ್ಷಣ ವರ್ಷದ ಪ್ರಾರಂಭೋತ್ಸವ ಭಾನುವಾರ ನೆರವೇರಿತು.
ಸೊಮ್ಯಾ, ಆಮ್ಕಾಂ ಮಾಗೊಂಕ್ ಶಿಕಾಯ್ (ಕರ್ತರೇ, ನಮಗೆ ಪ್ರಾರ್ಥಿಸಲು ಕಲಿಸಿರಿ) ಎಂಬ ಧ್ಯೇಯ ವಾಕ್ಯದೊಂದಿಗೆ ದೀಪ ಬೆಳಗಿಸಿ ಕ್ರೈಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು, ಹೆತ್ತವರು, ಹಿರಿಯರ ಪ್ರತಿನಿಧಿಗಳೊಂದಿಗೆ ಕ್ರೈಸ್ತ ಶಿಕ್ಷಣದ ವರ್ಷವನ್ನು ಉದ್ಘಾಟಿಸಲಾಯಿತು.
ಅದರಂತೆ ಇಂದು ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಈ ಕಾರ್ಯಕ್ರಮವನ್ನು ಚರ್ಚಿನ ಧರ್ಮಗುರು ರೆ. ಫಾ. ಆಲ್ಬನ್ ಡಿ ಸೋಜ ಅವರು ಉದ್ಘಾಟಿಸಿದರು. ಚರ್ಚಿನ
ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕ್ರೈಸ್ತ ಶಿಕ್ಷಣ ಸಂಯೋಜಕಿ ಲಿಝೀ ಫೆರ್ನಾಂಡಿಸ್, ಶಿಕ್ಷಕಿ ಪ್ರತಿನಿಧಿ ರೆನಿಟಾ ಟೆಲ್ಲಿಸ್, ಮಕ್ಕಳ ಪ್ರತಿನಿಧಿ ರಿಶೋನ್ ಪಿಂಟೊ, ಶಿಕ್ಷಕರಾದ ಸಿಸ್ಟರ್ ಡೊರೊತಿ,ಮರ್ಲಿನ್ ಮೊಂತೇರೊ, ಅಸುಮ್ತಾ ಮೊಂತೇರೊ, ಜೆಸಿಂತಾ ವಾಲ್ಡರ್, ವೀಣಾ ಡಿಮೆಲ್ಲೊ, ಶಾಂತಿ ಮೊಂತೇರೊ, ರೆನಿಟಾ ಟೆಲ್ಲಿಸ್, ಲಿಝೀ ಫೆರ್ನಾಂಡಿಸ್, ನಿಶಾ ಬ್ರಾಗ್ಸ್, ಮಾಲಿನಿ ಫೆರ್ನಾಂಡಿಸ್, ಗ್ರಾಸಿಯಾ ಪಿಂಟೊ ಉಪಸ್ಥಿತರಿದ್ದರು.