ಇತ್ತೀಚಿನ ಸುದ್ದಿ
ಪಾಲ್ದಾನೆ ಸಂತ ತೆರೆಸಾ ಚರ್ಚ್: ರೋಸರಿ ತಿಂಗಳ ಪ್ರಾರ್ಥನೆ ಸಮಾಪ್ತಿ ಸಮಾರಂಭ
31/05/2024, 19:36
ಮಂಗಳೂರು(reporterkarnataka.com):ಕ್ಯಾಥೋಲಿಕ್ ಕ್ರೈಸ್ತರಿಗೆ ಮೇ ತಿಂಗಳು ಮರಿಯ ಮಾತೆಗೆ ಸಮರ್ಪಿಸಿದ ತಿಂಗಳಾಗಿದ್ದು, ಈ ತಿಂಗಳನ್ನು ರೋಸರಿ ತಿಂಗಳು ಎಂದು ಕರೆಯುತ್ತಾರೆ. ಮಂಗಳೂರಿನ ಪಾಲ್ದಾನೆ ಸಂತ ತೆರೆಸಾ ಚರ್ಚ್ ನ ಲೀಜನ್ ಆಫ್ ಮೇರಿ ಸಂಘದ ಸದಸ್ಯರು ತಿಂಗಳ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 6.30 ರ ವರೆಗೆ ರೋಸರಿ ಪ್ರಾರ್ಥನೆಯನ್ನು ನಡೆಸಿ ಕೊಟ್ಟು ಅದರ ಸಮಾಪ್ತಿಯನ್ನು ಇಂದು ಸಂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಪ್ರದಾನ ಧರ್ಮ ಗುರು ಫಾ. ಆಲ್ಬನ್ ಡಿ ಸೋಜಾ, ಸಂಘದ ಅಧ್ಯಕ್ಷೆ ಹೆಲೆನ್ ಲೋಬೋ, ಉಪಾಧ್ಯಕ್ಷೆ ಜಾಯ್ಸ್ ಡಿ ಸೋಜಾ , ಕಾರ್ಯದರ್ಶಿ ಫಿಲೋಮಿನಾ, ಖಜಾಂಚಿ ಪ್ರೇಸಿಲ್ಲಾ ಪಿರೇರಾ , ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೆರೊ ಉಪಸ್ಥಿತರಿದ್ದರು.