1:07 PM Saturday7 - February 2026
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ* ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,…

ಇತ್ತೀಚಿನ ಸುದ್ದಿ

ಮೊಹರಂ ಆಚರಣೆಗೆ ಕೊರೊನಾ ಕರಿನೆರಳು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಬ್ಬಕ್ಕೆ ಮಹಾಮಾರಿಯ ಕೊಡಲಿಯೇಟು

19/08/2021, 08:27

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಅಂತರಗಂಗೆ ರಾಯಚೂರು

info.reporterkarnataka@gmail.com

ಮೊಹರಂ ಹಬ್ಬವೆಂದರೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ದೊಡ್ಡ ಆಚರಣೆ. ಗ್ರಾಮೀಣ ಭಾಗದಲ್ಲಿ ಹಿಂದುಗಳು ಹೆಚ್ಚಾಗಿ ಸಂಭ್ರಮ ಸಡಗರದಿಂದ ಮೊಹರಂ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕೊರೊನಾದಿಂದ ಈ ಬಾರಿಯ ಮೊಹರಂ ಹಬ್ಬ ಫುಲ್ ಮಂಕಾಗಿದೆ.

ಮೊಹರಂ ಹಬ್ಬವನ್ನು ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಜನರು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.ಹಿಂದೂ-ಮುಸ್ಲಿಂ ಭೇದವಿಲ್ಲದೆ ಜನರು ಭಾವೈಕ್ಯತೆಯಿಂದ ಆವರಿಸಿಕೊಂಡು ಬರುತ್ತಿದ್ದಾರೆ. ದೂರದ ನಗರಗಳಿಗೆ ದುಡಿಯಲು ಹೋದವರು ಮೊಹರಂ ಹಬ್ಬಕ್ಕೆ ತಪ್ಪದೆ  ಊರಿಗೆ ಮರಳಿ ಬರುತ್ತಾರೆ. ಹಬ್ಬದ ಮುನ್ನ ದಿನವೇ ತಮ್ಮ ತಮ್ಮ ಗ್ರಾಮಗಳಿಗೆ ಬಂದು ಸೇರುತ್ತಾರೆ.

ಮತ್ತೆ ಹಬ್ಬ ಮುಗಿಸಿ ತಮ್ಮ ತಮ್ಮ ಕೆಲಸಗಳಿಗೆ ಪಟ್ಟಣಗಳಿಗೆ ತೆರಳುತ್ತಾರೆ. ಆದರೆ ಈ ಬಾರಿ ಮೊಹರಂ ಆಚರಣೆ ಸರಕಾರದ ಆದೇಶದಂತೆ ನಡೆಯಲಿದೆ. ಗುದ್ದಲಿ ಹಾಕೋದಿಲ್ಲ. ಮೊಹರಂ ಕುಣಿತ ಇಲ್ಲ. ಜನ ಸೇರುವಂತಿಲ್ಲ. ಇದು ಸರಕಾರದ ಆದೇಶವಾಗಿದೆ. ಇದಕ್ಕೆಲ್ಲ ಕಾರಣ ಮಹಾಮಾರಿ ಕೊರೊನಾ. ಕೇವಲ ಸಾಂಕೇತಿಕ ಆರಣೆಗೆ ಮಾತ್ರ ಸೀಮಿತವಾಗಿದೆ.

ಮೊಹರಂ ಬರುವುದಕ್ಕಿಂತ ತಿಂಗಳು ಮುನ್ನವೇ ಗ್ರಾಮೀಣ ಪ್ರದೇಶದ ಜನರು ಮನೆ ಸ್ವಚ್ಛಗೊಳಿಸಿ ಬಣ್ಣ ಬಳಿಯುತ್ತಾರೆ. ಮನೆ ಮಂದಿಗೆ ಬಣ್ಣ ಬಣ್ಣದ ಹೊಸ ಬಟ್ಟೆಗಳನ್ನು ಖರೀದಿಸಲಾಗುತ್ತದೆ. ತಮ್ಮ ಬಂಧು ಬಾಂಧವರನ್ನು ಕರೆಸಿ ಕಂಜುರಿ ಮಾಡಿಸಿ ಊಟ ನೀಡಲಾಗುತ್ತದೆ.

ಹಾಡುಗಳ ಸ್ಪರ್ಧೆ ಏರ್ಪಡಿಸಿ ಬೆಳತನಕ ಗೀಗಿ ಪದ, ಸವಾಲ್ ಪದ, ಜವಾಬು ಪದ ನಡೆಯುತ್ತದೆ. ಅಡ್ಡ ಸೋಗು ಪಾತ್ರಗಳು ಕಂಡುಬರುತ್ತವೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಛತ್ರಿ ಹಿಡಿದುಕೊಂಡು ತಾಳಕ್ಕೆ ತಕ್ಕಂತೆ ಕುಣಿಯುವುದು ತಂಡಗಳು ಬಹಳ ರಂಜನೀಯವಾಗಿರುತ್ತದೆ. ದೇವರು ಕುಳಿತ ಸ್ಥಳದಲ್ಲೇ ಅಲೆಕುಣಿ ತೆಗೆದು ಅದರಲ್ಲಿ ಬೆಂಕಿ ಹಚ್ಚಿ ಅದರ ಸುತ್ತಲೂ ತಮ್ಮ ಬೇಡಿಕೆಗಳ ಈಡೇರಿಸಿ ಕೊಳ್ಳುತ್ತಾ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಕೆಲವರು ಬೆಂಕಿಯಲ್ಲಿ ನಡೆಯುತ್ತಾರೆ. 

ದೇವರ ಎದುರು-ಬದುರು ಅಪ್ಪಿಕೊಳ್ಳುವುದು ನಡೆಯುತ್ತದೆ. ಆದರೆ ಈ ಬಾರಿ ಕರಿನೆರಳು ಕರೆದಿರುವುದರಿಂದ ದೇವರಿಗೆ ಕೂಡಿಸುವುದು ಕಡಿಮೆ. ಜನರು ಮನದಲ್ಲಿ ಸ್ಮರಿಸುವಂತಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಜನರ ಬದುಕಿಗೆ ರಂಗು ನೀಡುವ ಮೊಹರಂ ಹಬ್ಬಕ್ಕೆ ಕೊರೊನಾದ  ಕರಿನೆರಳು ಬಿದ್ದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು