ಇತ್ತೀಚಿನ ಸುದ್ದಿ
ಡ್ರಾಮಾ ಜೂನಿಯರ್ಸ್ ಸೀಸನ್ 5 ವಿಜೇತೆ ರಿಷಿಕಾ ಕುಂದೇಶ್ವರಗೆ ಆಳ್ವಾಸ್ ಪ್ರತಿಭಾ ಪುರಸ್ಕಾರ ಗೌರವ ಪ್ರದಾನ
22/05/2024, 14:39
ಮಂಗಳೂರು(reporterkarnataka.com): ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಸೀಸನ್ 5 ವಿಜೇತೆ ರಿಷಿಕಾ ಕುಂದೇಶ್ವರ ಅವರಿಗೆ ಆಳ್ವಾಸ್ ಪ್ರತಿಭಾ ಪುರಸ್ಕಾರ ಗೌರವ ಪ್ರದಾನ ಮಾಡಲಾಯಿತು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಚಿಣ್ಣರ ಮೇಳ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಪ್ರದಾನ ಮಾಡಿದರು.
ವೈದ್ಯರಾದಿಯಾಗಿ ಪ್ರತಿಯೊಬ್ಬರು ಜೀವನದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ನಟನೆ ಮಾಡುತ್ತಲೇ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ ಎಂದು ಅಭಿನಯ ತರಬೇತಿಯ ಪ್ರಾಧಾನ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಮಕ್ಕಳ ನಟನೆಯಿಂದ ಮಕ್ಕಳಿಗೂ, ಹೆತ್ತವರಿಗೂ ಖುಷಿ, ಆಕರ್ಷಣೆ ಹೆಚ್ಚಲಿದೆ ಎಂದು ಮೋಹನ ಆಳ್ವ ಹೇಳಿದರು.
ಆಳ್ವಾಸ್ ಫೌಂಡೇಶನ್ ನ ಟ್ರಸ್ಟಿ ವಿವೇಕ ಆಳ್ವ, ರಂಗ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ, ಸಂಪನ್ಮೂಲ ವ್ಯಕ್ತಿ ರಂಗ ನಿರ್ದೇಶಕಿ ಗಿರಿಜಾ ಸಿದ್ದಿ, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಯೋಗೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ರಿಷಿಕಾ ಕುಂದೇಶ್ವರ ಹರಿಕಥೆ, ಉದ್ಘಾಟನಾ ರಂಗಗೀತೆ ಹಾಗೂ ವೈದೇ ಹಿಯವರ ನಾಯಿಮರಿ ನಾಟಕದ ತುಣುಕು ಪ್ರದರ್ಶಿಸಲಾಯಿತು.